ಬೆಂಗಳೂರು, ಮಾ.25 (Daijiworld News/MSP) : ಅಪಾಯಕಾರಿ ಮಟ್ಟದಲ್ಲಿ ಹರಡತ್ತಿರುವ ಕೊರೊನಾ ವೈರಸ್ ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ನಿಲುವು ತಾಳಿದ್ದು, ದೇಶದಾದ್ಯಂತ ಮುಂದಿನ 21 ದಿನಗಳ ಲಾಕ್ ಡೌನ್ ಘೋಷಿಸಿದೆ. ಹೀಗಾಗಿ ಸಾರ್ವಜನಿಕರು ಇನ್ನೂ 21 ದಿನ ಮನೆಗಳಲ್ಲಿಯೇ ಉಳಿಯಬೇಕಾದರೆ ಅನಿವಾರ್ಯತೆ ಇದೆ. ಆದರೆ ಇದರಿಂದ ಗಾಬರಿಯಾಗಬೇಕಾದ ಅಗತ್ಯವಿಲ್ಲ. ಯಾಕೆಂದರೆ ಅಗತ್ಯ ವಸ್ತುಗಳನ್ನು ಪೂರೈಕೆ ಮತ್ತು ಮಾರಾಟಕ್ಕ ಅವಕಾಶ ನೀಡಲಾಗಿದೆ. ಇದನ್ನು ಹೊರತುಪಡಿಸಿದ ಉಳಿದ ಎಲ್ಲ ಸೇವೆಗಳು ಮಾತ್ರ ರದ್ದಾಗಲಿವೆ.
ಹಾಗಿದ್ದರೆ ಮುಂದಿನ 21 ದಿನಗಳಲ್ಲಿ ಜನರಿಗೆ ಲಭ್ಯವಾಗುವ ಸೇವೆಗಳ ಪಟ್ಟಿ ಇಲ್ಲಿದೆ.
* ಪಡಿತರ ಅಂಗಡಿ, ಆಹಾರ, ದಿನಸಿ, ತರಕಾರಿ, ಹಾಲು, ಮಾಂಸ-ಮೀನು ಅಂಗಡಿ
*ಕ್ಲಿನಿಕ್, ಆಸ್ಪತ್ರೆಗಳು, ಸಂಬಂಧಿಸಿದ ವೈದ್ಯಕೀಯ ಸಂಸ್ಥೆಗಳು ಇತ್ಯಾದಿ
*ಪೆಟ್ರೋಲ್ ಪಂಪ್, ಎಲ್ಪಿಜಿ.
* ಆಹಾರ, ಔಷಧ, ವೈದ್ಯಕೀಯ ಉಪಕರಣಗಳ ಆನ್ಲೈನ್ ಡೆಲಿವರಿ
*ಬ್ಯಾಂಕ್, ಎಟಿಎಂ, ವಿಮಾ ಕಚೇರಿಗಳು
* ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು
* ಟೆಲಿಕಮ್ಯೂನಿಕೇಷನ್, ಇಂಟರ್ನೆಟ್ ಸೇವೆಗಳು, ಪ್ರಸಾರ ಮತ್ತು ಕೇಬಲ್ ಸೇವೆಗಳು
*ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆ ಸೇವೆ
*ಬಂಡವಾಳ ಮಾರುಕಟ್ಟೆ
* ಶೀತಲೀಕರಣ ಮತ್ತು ದಾಸ್ತಾನು ಸೇವೆ
*ಖಾಸಗಿ ಭದ್ರತಾ ಸಂಸ್ಥೆಗಳು
*ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು
* ಸರಕು ಸಾಗಣೆ ವ್ಯವಸ್ಥೆ
*ಅಗ್ನಿಶಾಮಕ, ಕಾನೂನು ಮತ್ತು ಸುವ್ಯವಸ್ಥೆ, ತುರ್ತು ಸೇವೆಗಳು
*ಲಾಕ್ ಡೌನ್ ನಿಂದಾಗಿ ಅತಂತ್ರಗೊಂಡಿರುವ ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಕಲ್ಪಿಸಿರುವಂಥ ಹೊಟೇಲ್, ಹೋಂ ಸ್ಟೇಗಳು, ಲಾಡ್ಜ್, ಹೋಟೆಲ್ಗಳು
* ನಿಗಾ ಕೇಂದ್ರಗಳಾಗಿ ಬಳಸಲಾಗುತ್ತಿರುವ ಸಂಸ್ಥೆಗಳು
* ರಕ್ಷಣೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ವಿಪತ್ತು ನಿರ್ವಹಣೆ, ಅಂಚೆ ಕಚೇರಿ