ನವದೆಹಲಿ, ಮಾ.25 (Daijiworld News/MSP): ಕೋವಿಡ್–19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ರೈಲು ಸೇವೆ ಸ್ಥಗಿತಗೊಳಿಸುವುದನ್ನು ಏಪ್ರಿಲ್ 14 ರವರೆಗೆ ಮುಂದುವರಿಸುವುದಾಗಿ ಭಾರತೀಯ ರೈಲ್ವೆ ಮಂಗಳವಾರ ಪ್ರಕಟಿಸಿದೆ.
ದೇಶಾದ್ಯಂತ 21 ದಿನಗಳ ಲಾಕ್ಡೌನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬಳಿಕ ಭಾರತೀಯ ರೈಲ್ವೆಯೂ ಇದಕ್ಕೆ ಪೂರಕ ಕ್ರಮವನ್ನು ಕೈಗೊಂಡಿದೆ.
ಅದರೂ , ಪ್ರಯಾಣಿಕ ರೈಲುಗಳನ್ನು ಹೊರತುಪಡಿಸಿ, ದೇಶದಾದ್ಯಂತ ಅಗತ್ಯ ಸರಕುಗಳನ್ನು ಸಾಗಿಸಲು ಸರಕು ಸಾಗಣೆ ರೈಲು ಮುಂದುವರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ರೈಲು ವಸ್ತು ಸಂಗ್ರಹಾಲಯಗಳು, ಪಾರಂಪರಿಕ ಗ್ಯಾಲರಿಗಳನ್ನು ಮುಚ್ಚಲು ರೈಲ್ವೆ ಆದೇಶಿಸಿದೆ.
ಅಗತ್ಯ ಸರಕುಗಳನ್ನು ಸಾಗಿಸಲು ಸರಕು ಸಾಗಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಈ ಅವಧಿಯಲ್ಲಿ ಜೂನ್ 21 ರವರೆಗೆ ರದ್ದಾದ ಎಲ್ಲಾ ರೈಲುಗಳಿಗೆ ಪ್ರಯಾಣಿಕರು ಸಂಪೂರ್ಣ ಮರುಪಾವತಿ ಪಡೆಯಬಹುದು ಎಂದು ರೈಲ್ವೆ ಹೇಳಿದೆ.