ನವದೆಹಲಿ, ಮಾ.25 (Daijiworld News/MB) : ಇಂದು ಯುಗಾದಿ ಹಬ್ಬವಾಗಿದ್ದು ಆದರೆ ಕೊರೊನಾದಿಂದಾಗಿ ಯುಗಾದಿ ಹಬ್ಬದ ಸಂಭ್ರಮದ ಆಚರಣೆಗೆ ಬ್ರೇಕ್ ಬಿದ್ದಿದೆ. ಜನರೆಲ್ಲಾ ಮನೆಯಲ್ಲಿಯೇ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಯುಗಾದಿ ಹಬ್ಬದ ಶುಭಾಷಯಗಳು, ಭಾರತದಾದ್ಯಂತ ಹಲವಾರು ಹಬ್ಬಗಳನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತೇವೆ. ಹಾಗೆಯೇ ಸಾಂಪ್ರದಾಯಿಕವಾಗಿ ಯುಗಾದಿ ಹೊಸ ವರುಷ ಎನಿಸಿಕೊಳ್ಳುತ್ತದೆ. ಹಾಗಾಗಿ ದೇಶದ ಎಲ್ಲಾ ಜನರಿಗೆ ಯುಗಾದಿಯ ಶುಭ ಕೋರುತ್ತೇನೆ. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ , ಸಂತೋಷ ತರಲಿ ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೊನಾದ ಆತಂಕ ಉಂಟಾಗುತ್ತಿರುವಾಗಲೇ ನಾವು ಯುಗಾದಿ ಹಬ್ಬ ಆಚರಿಸುತ್ತಿದ್ದೇವೆ. ಹಾಗಾಗಿ ನಾವು ಪ್ರತಿವರ್ಷದಂತೆ ಈ ವರ್ಷ ಹಬ್ಬವನ್ನು ಆಚರಿಸಲಾಗುವುದಿಲ್ಲ. ಈ ಬಾರಿ ಹಬ್ಬವನ್ನು ದರವಾಗಿ ಆಚರಿಸಿ ಹಾಗೂ ಕೊರೊನಾ ವಿರುದ್ಧ ಹೋರಾಡುವ ಸಂಕಲ್ಪ ಕೈಗೊಳ್ಳಿ ಎಂದು ತಿಳಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೂಡ ಟ್ವೀಟ್ ಮಾಡಿದ್ದು, ಕನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ಸಂವತ್ಸರ ಸರ್ವರಿಗೆ ಶುಭವನ್ನು ತರಲಿ. ಕೊರೊನ ಸೋಂಕು ಹರಡುವಿಕೆ ತಡೆಗಟ್ಟಲು ಮನೆಗಳಲ್ಲಿಯೇ ಯುಗಾದಿಯ ಸಂಭ್ರಮವನ್ನು ಆಚರಿಸಿ ಎಂದು ಹೇಳಿದ್ದಾರೆ.