ನವದೆಹಲಿ, ಮಾ.25 (DaijiworldNews/PY) : ರಾಜ್ಯಸಭಾ ಚುನಾವಣೆಯು ಮಾ. 26ರಂದು ನಿಗದಿಯಾಗಿದ್ದು, ಕೊರೊನಾ ಭೀತಿ ಹಿನ್ನೆಲೆ ಮುಂದೂಡಿರುವುದಾಗಿ ಚುನಾವಣ ಆಯೋಗ ಮಂಗಳವಾರ ತಿಳಿಸಿದೆ. ಕೊರೊನಾ ಆತಂಕ ಹಿನ್ನೆಲೆಯಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಚುನಾವಣೆಯ ದಿನಾಂಕದ ಕುರಿತು ಮಾ. 31ರ ಬಳಿಕ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದಾಗಿ ಚುನಾವಣಾ ಆಯುಕ್ತರಾದ ಅಶೋಕ್ ಲಾವಸ ಮತ್ತು ಸುಶೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನಾವು ಶಾಸಕರನ್ನು ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಒಳಪಡಿಸಬಾರದು. ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಗೆ ಅಗತ್ಯವಾಗಿ ಒಂದೆಡೆ ಸೇರಲೇಬೇಕಾಗುತ್ತದೆ.
ಚುನಾವಣ ಆಯೋಗ ಚುನಾವಣೆ ಮುಂದೂಡಲು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಒಂದೆಡೆ ಗುಂಪು ಸೇರುವುದು ಅಪಾಯವಾದ್ದರಿಂದ ಸ್ವತಂತ್ರವಾಗಿ ತೀರ್ಮಾನ ಕೈಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಒಂದೆಡೆ ಗುಂಪು ಸೇರುವುದು ಅಪಾಯವಾದ್ದರಿಂದ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.