ನವದೆಹಲಿ, ಮಾ.25 (DaijiworldNews/PY) : ಪ್ರಧಾನಿ ಮೋದಿ ಅವರು ಕೊರೊನಾ ವೈರಸ್ ವಿರುದ್ದ ಹೋರಾಡಲು ಕರೆ ನೀಡಿರುವ 21 ದಿನಗಳ ಲಾಕ್ಡೌನ್ ಆದೇಶಕ್ಕೆ ಇಡೀ ದೇಶ ಬೆಂಬಲ ವ್ಯಕ್ತಪಡಿಸಿದೆ. ಆದರೆ ಈ ಆದೇಶಕ್ಕೆ ಉಚ್ಛಾಟಿತ ಜೆಡಿಯು ನಾಯಕ ಹಾಗೂ ರಾಜನೀತಿ ತಜ್ಞ ಪ್ರಶಾಂತ್ ಕಿಶೋರ್ ಅವರು ಅಪಸ್ವರ ನುಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ದೇಶವನ್ನು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡುವ ಆದೇಶ ಸರಿಯಾದುದು, ಆದರೆ, 21 ದಿನಗಳು ಅತ್ಯಂತ ದೀರ್ಘ ಸಮಯ ಎಂದು ಹೇಳಿದ್ದಾರೆ.
ಅಲ್ಲದೇ, ಕೇಂದ್ರ ಸರ್ಕಾರ ಕೊರೊನಾ ವೈರಸ್ ವಿರುದ್ದ ಹೋರಾಡಲು ಅತ್ಯಂತ ತಡವಾಗಿ ಸಿದ್ಧವಾಗಿದೆ. ದೇಶಕ್ಕೆ ಗಂಡಾಂತರಕಾರಿ ದಿನಗಳು ಕಾದಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಶಾಂತ್ ಕಿಶೋರ್ ಅವರ ಟ್ವೀಟ್ಗೆ ವಿರೋಧ ವ್ಯಕ್ತವಾಗಿದ್ದು, ಹಲವರು ಪ್ರಶಾಂತ್ ಕಿಶೋರ್ ಅವರನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.