ನವದೆಹಲಿ, ಮಾ.25 (Daijiworld News/MSP) : ಕೊರೊನಾ ವೈರಸ್ ಲಾಕ್ ಡೌನ್ ಇರುವುದರಿಂದ ಹೆಚ್ಚಾಗಿ ಜನರೆಲ್ಲಾ ಮನೆಗಳಲ್ಲೆ ಇಂಟರ್ನೆಟ್ ಬಳಕೆದಾರರು ಹೆಚ್ಚಾಗಿದ್ದು ಇಂಟರ್ನೆಟ್ ಬ್ಯಾಂಡ್ವಿಡ್ತ್ ಮೇಲೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದೆ.
ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಮನವಿ ಮೇರೆಗೆ ಇಂಟರ್ನೆಟ್ ಬ್ಯಾಂಡ್ವಿಡ್ತ್ ನಲ್ಲಿ ವೀಡಿಯೊ ವಿಷಯಾಧರಿತವಾಗಿ ಒದಗಿಸುವ ಟಾಪ್ (ಒಟಿಟಿ) ಪ್ಲಾಟ್ಫಾರ್ಮ್ಗಳು, ಸ್ಟ್ರೀಮಿಂಗ್ ಗುಣಮಟ್ಟವನ್ನು ಕಡಿಮೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಈ ಕ್ರಮವು ಲಾಕ್ ಡೌನ್ ಇರುವ ಏಪ್ರಿಲ್ 14 ರವರೆಗೆ ಜಾರಿಯಲ್ಲಿರುತ್ತವೆ ಅಂತ ನೆಟ್ಫ್ಲಿಕ್ಸ್, ಹಾಟ್ಸ್ಟಾರ್, ಫೇಸ್ಬುಕ್ ಮಾಹಿತಿ ನೀಡಿದೆ.
ದೇಶವು ಸಂಪೂರ್ಣ ಲಾಕ್ಡೌನ್ನಲ್ಲಿದ್ದು, ಬಹುತೇಕ ಮಂದಿ ನೌಕರರನ್ನು ಮನೆಯಿಂದ ಕೆಲಸ ಮಾಡಲು ಮಾದುತ್ತಿದ್ದಾರೆ. ಇನ್ನು ಕೆಲವರು ಲೌಕ್ ಡೌನ್ ನಿಂದ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಹಲವು ಮಂದಿ ಮನೆಯಲ್ಲೇ ಬಂಧಿಯಾಗಿರುವ ಸ್ಥಿತಿಯಲ್ಲಿರುವುದರಿಂದ ಅತಿ ಹೆಚ್ಚು ನೆಟ್ವರ್ಕ್ ಡಾಟ ಬಳಕೆ ಮಾಡುತ್ತಿದ್ದು ಹಾಗೂ ಇಂಟರ್ ನೆಟ್ ಮೂಲಕ ಮನೋರಂಜನೆ ಪಡೆಯುತ್ತಿರುವುದರಿಂದ ಎಲ್ಲೆಡೆ ನೆಟ್ವರ್ಕ್ ಸಂಪರ್ಕಗಳಿಗೆ ಒತ್ತಡವನ್ನುಂಟು ಮಾಡಿದ್ದು, ನಿಧಾನವಾಗಿ ಡೇಟಾ ಸಾಗಾಣೆಯಾಗುತ್ತಿದೆ.
ಈ ಹಿನ್ನಲೆಯಲ್ಲಿ ಎಂಎಕ್ಸ್ ಪ್ಲೇಯರ್, ವಯಾಕಾಮ್ 18, ಗೂಗಲ್ ,ಸೋನಿ,ಫೇಸ್ಬುಕ್ ,ನೆಟ್ಫ್ಲಿಕ್ಸ್, ಎಂಎಕ್ಸ್ ಪ್ಲೇಯರ್, ಟಿಕ್ ಟಾಕ್, ಹಾಟ್ ಸ್ಟಾರ್ ಮುಂತಾದವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಬಗ್ಗೆ ಹೇಳಲಾಗಿದೆ.