ಬೆಂಗಳೂರು, ಮಾ.26 (Daijiworld News/MB) : ಕೊರೊನಾ ವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲು ನಾಗರಿಕರು 'ಮುಖ್ಯಮಂತ್ರಿಗಳ ಪರಿಹಾರ ನಿಧಿ' ಗೆ ಉದಾರವಾಗಿ ದೇಣಿಗೆ ನೀಡಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ಕುರಿತು ಸಾರ್ವಜನಿಕರಲ್ಲಿ ಮನವಿ ಮಾಡಿ ಟ್ವೀಟ್ ಮಾಡಿರುವ ಅವರು, "ಸಹೃದಯಿ ನಾಗರಿಕರಲ್ಲಿ ಮನವಿ ಕೊರೊನಾ ಸೋಂಕಿನ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಸಹೃದಯಿ ನಾಗರಿಕರು 'ಮುಖ್ಯಮಂತ್ರಿಗಳ ಪರಿಹಾರ ನಿಧಿ' ಗೆ ಉದಾರವಾಗಿ ದೇಣಿಗೆ ನೀಡುವ ಮೂಲಕ ಭಾಗಿಗಳಾಗಲು ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ.
ಕರ್ನಾಟಕ ಕೊರೊನಾ ಸಾಂಕ್ರಾಮಿಕದ ವಿರುದ್ಧ ತನ್ನ ಹೋರಾಟವನ್ನು ಮಾಡುತ್ತಿದೆ. ಆದರೆ ನಾಗರಿಕರ, ಕೈಗಾರಿಕೋದ್ಯಮಿಗಳು ಹಾಗೂ ಇತರ ಉದ್ಯಮಿಗಳು ಸಹಕಾರವಿಲ್ಲದೆ ಈ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲ್ಲಲು ಕಷ್ಟ ಎಂದು ತಿಳಿಸಿದ್ದಾರೆ.
ಕೊರೊನಾ ನಿಧಿಗಾಗಿ ನೀವು ಕೊಡುಗೆ ನೀಡಿ, ಈ ಕಷ್ಟಕರ ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯಕ್ಕೆ ಸಹಾಯ ಮಾಡಿ ಎಂದು ನಾನು ಈ ಮೂಲಕ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆ ವಿವರ
ಖಾತೆ ಹೆಸರು: Chief ministers relief fund covid 19
ಬ್ಯಾಂಕ್ ಹೆಸರು: ಎಸ್ಬಿಐ
ಶಾಖೆ: ವಿಧಾನಸೌಧ
ಖಾತೆ ಸಂಖ್ಯೆ: 39234923151
ಐಎಫ್ಎಸ್ಸಿ ಕೋಡ್: SBIN0040277
ಐಎಂಸಿಆರ್ ಸಂಖ್ಯೆ: 560002419
ಚೆಕ್/ ಡಿಸಿ ಕಳುಹಿಸಿಕೊಡಬೇಕಾದ ವಿಳಾಸ: ನಂ.235–ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು– 01