ಮಡಿಕೇರಿ, ಮಾ.26 (Daijiworld News/MSP) : ಇಲ್ಲಿನ ಗಣಪತಿ ಬೀದಿಯ ನಿವಾಸಿ ಸುಮಾರು 30 ವರ್ಷದ ಪ್ರಾಯದ ವ್ಯಕ್ತಿಯೊಬ್ಬರು ಮಾ.12 ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮೂಲಕ ತನ್ನ ಸ್ವಂತ ಊರಾದ ಮಡಿಕೇರಿಗೆ ಬಂದಿಳಿದಿದ್ದರು.
ಇವರಿಗೆ ಜಿಲ್ಲಾಡಳಿತವೂ 14 ದಿನಗಳ ಕಾಲ ಮನೆಯಿಂದ ಹೊರ ಬಾರದಂತೆ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ಇವರಿಗೆ ನೀಡಿಲಾಗಿದ್ದ ನಿರ್ದೇಶನಗಳನ್ನು ಉಲ್ಲಂಘಿಸಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದದ್ದು ಕಂಡುಬಂದಿದೆ.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಹಾಗೂ ಕೊಡಗು ಜಿಲ್ಲಾಧಿಕಾರಿಗಳು ಮಾಡಿರುವ ಆದೇಶಗಳನ್ನು ಉಲ್ಲಂಘಿಸಿ ಹೊರದೇಶದಿಂದ ಹಾಗೂ ವೈರಾಣು ಸೋಂಕಿನ ಬಾಧಿತ ದೇಶದಿಂದ ಬಂದಿದ್ದು, ಸಾರ್ವಜನಿಕವಾಗಿ ಓಡಾಡಿದರೆ ವೈರಾಣುವಿನ ಸೋಂಕು ಸಾರ್ವಜನಿಕರಿಗೆ ಹರಡಬಹುದು ಎಂಬ ಮಾಹಿತಿಯ ಅರಿವಿದ್ದರೂ ಕೂಡ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಿ ಸಾರ್ವಜನಿಕರೊಂದಿಗೆ ಬೆರೆತು ನೀಡಿರುವ ಆದೇಶಗಳನ್ನು ಉಲ್ಲಂಘನೆ ಮಾಡಿರುವ ಹಿನ್ನಲೆಯಲ್ಲಿ ಇವರನ್ನು ಮಡಿಕೇರಿಯ ಜಿಲ್ಲಾ ಕ್ವಾರಂಟೈನ್ ಗೆ ದಾಖಲಿಸಿ ಇವರ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣೆಯ ಪ್ರಕರಣ ದಾಖಲಿಸಿಲಾಗಿದೆ.