ಲಕ್ನೋ, ಮಾ.26 (DaijiworldNews/PY) : ಕೊರೊನಾ ವೈರಸ್ ತಡೆಗಟ್ಟಲು ಇಡೀ ದೇಶದ್ಯಂತ ಲಾಕ್ಡೌನ್ ಆಗಿದ್ದರೂ, ಈ ನಡುವೆ ಸ್ವಯಂ ಘೋಷಿತ ಮಾ ಆದಿ ಶಕ್ತಿ ದೇವ ಮಹಿಳೆಗೆ ಧಾರ್ಮಿಕ ಪ್ರಾರ್ಥನಾ ಸಭೆಯನ್ನು ಬಂದ್ ಮಾಡುವಂತೆ ಸೂಚಿಸಿದಕ್ಕೆ ಪೊಲೀಸರಿಗೆ ಖಡ್ಗ ಹಿಡಿದು ಧಮ್ಕಿ ಹಾಕಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಸ್ವಯಂ ಘೋಷಿತ ದೇವ ಮಹಿಳೆಯು ಕೆಂಪು ಸೀರೆಯನ್ನುಟ್ಟಿದ್ದು, ಪೊಲೀಸರ ಎದುರು ಖಡ್ಗವನ್ನು ತಿರುಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಧಾರ್ಮಿಕ ಪ್ರಾರ್ಥನಾ ಸಭೆಯನ್ನು ನಿಲ್ಲಿಸುವಂತೆ ಸೂಚಿಸಿದ್ದರೂ ಕೇಳದೆ ಇದ್ದ ಸ್ವಯಂ ಘೋಷಿತ ದೇವ ಮಹಿಳೆಯನ್ನು 15ಕ್ಕೂ ಅಧಿಕ ಪೊಲೀಸರು ಸುತ್ತುವರಿದು ಸೆರೆಹಿಡಿದು ವಾಹನದೊಳಕ್ಕೆ ಹಾಕಿಕೊಂಡು ಹೋಗಿದ್ದಾರೆ ಎಂದು ವರದಿ ತಿಳಿಸಿದೆ.
ಪೊಲೀಸರು ಧಾರ್ಮಿಕ ಪ್ರಾರ್ಥನಾ ಸಭೆಯನ್ನು ನಿಲ್ಲಿಸುವಂತೆ ಸೂಚಿಸಿದರೂ ಕ್ಯಾರೇ ಎನ್ನದೆ ಖಡ್ಗ ಹಿಡಿದು ಧಮ್ಕಿ ಹಾಕಿರುವ ಸ್ವಯಂ ಘೋಷಿತ ಮಹಿಳೆ ಇದೀಗ ಪೊಲೀಸರ ವಶವಾಗಿದ್ದಾಳೆ ಎಂದು ವರದಿ ತಿಳಿಸಿದೆ.
ಸ್ವಯಂ ಘೋಷಿತ ಮಾ ಆದಿ ಶಕ್ತಿ ದೇವ ಮಹಿಳೆಯ ಆಶ್ರಮದ ಬಳಿ ಸೇರಿದ್ದ ಜನರನ್ನು ಲಾಠಿಚಾರ್ಜ್ ನಡೆಸಿ ಪೊಲೀಸರು ಗುಂಪನ್ನು ಚದುರಿಸಿರುವುದಾಗಿ ವರದಿ ತಿಳಿಸಿದೆ. ಮಹಿಳೆಯು, ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಮೊದಲ ದಿನ ಲಾಕ್ಡೌನ್ ವಿರೋಧಿಸಿ ಧಾರ್ಮಿಕ ಸಭೆಯನ್ನು ಏರ್ಪಡಿಸಿದ್ದಳು.