ಶ್ರೀನಗರ, ಮಾ.26 (Daijiworld News/MB) : ಕೊರೊನಾ ಸೋಂಕಿನಿಂದಾಗಿ ಜಮ್ಮು ಕಾಶ್ಮೀರದಲ್ಲಿ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದು ಇದು ಜಮ್ಮು ಕಾಶ್ಮೀರದಲ್ಲಿ ಕೊರೊನಾದ ಮೊದಲ ಬಲಿಯಾಗಿದೆ ಎಂದು ವರದಿಯಾಗಿದೆ.
65 ವರ್ಷದ ಪ್ರಾಯದ ಕೊರೊನಾ ಸೋಂಕಿತ ಶ್ರೀನಗರದ ದಾಲ್ ಗೇಟ್ ನ ಎದೆರೋಗಗಳ ಆಸ್ಪತ್ರೆಗೆ ದಾಖಲಾಗಿದ್ದು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿತ ವ್ಯಕ್ತಿಯು ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ನಾವು ಎಷ್ಟೆ ಪ್ರಯತ್ನ ಪಟ್ಟರೂ ಅವರನ್ನು ಬದುಕಿಸಲು ಆಗಲಿಲ್ಲ. ಇಂದು ಮುಂಜಾನೆ ಹೃದಾಯಾಘಾತವಾಗಿದ್ದು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿರುವುದಾಗಿ ಮಾಧ್ಯಮ ವರದಿ ಮಾಡಿದೆ.