ನವದೆಹಲಿ, ಮಾ.26 (DaijiworldNews/PY) : ಈಶಾನ್ಯ ದೆಹಲಿಯ ಮೊಹಲ್ಲಾ ಕ್ಲಿನಿಕ್ನ ವೈದ್ಯರೊಬ್ಬರಲ್ಲಿ ಕೊರೊನಾ ವೈರಸ್ ದೃಢಪಟ್ಟಿದ್ದು, ವೈದ್ಯರು ಇದೀಗ ಚಿಕಿತ್ಸೆ ನೀಡಿದ್ದ ಜನರ ಮೇಲೆ ತೀವ್ರ ನಿಗಾವಹಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಕೊರೊನಾ ಸೋಂಕು ಕೇವಲ ವೈದ್ಯರಲ್ಲಿ ಮಾತ್ರವಲ್ಲದೇ, ಅವರ ಪತ್ನಿ ಹಾಗೂ ಮಗಳಲ್ಲೂ ದೃಢಪಟ್ಟಿದ್ದು, ಆತಂಕ ಸೃಷ್ಠಿಯಾಗಿದೆ.
ಮಾ.12 ರಿಂದ 18ರವರೆಗೆ ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮೌಜ್ಪುರದಲ್ಲಿರುವ ಕ್ಲಿನಿಕ್ಗೆ ಭೇಟಿ ನೀಡಿದ ಎಲ್ಲರೂ ಕ್ವಾರಂಟೈನ್ನಲ್ಲಿ ಇರುವಂತೆ ಅಧಿಕಾರಿಗಲೂ ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೊರೊನಾ ಸೋಂಕು ಒಂದು ವೇಳೆ ವೈದ್ಯರ ತಪಾಸಣೆ ಸಂದರ್ಭ ತಗುಲಿದ್ದು, ಅಂತವರಿಗೆ ವೈರಸ್ ಲಕ್ಷಣ ಕಂಡುಬಂದಲ್ಲಿ ಅವರನ್ನು ಕೂಡಲೇ ಪ್ರತ್ಯೇಕವಾಗಿರಿಸಬೇಕು ಸೂಚಿಸಿದೆ.
ಸೋಂಕು ತಗುಲಿದ್ದ ವೈದ್ಯರು ವಿದೇಶಕ್ಕೆ ತೆರಳಿದ್ದರೆ, ಚಿಕಿತ್ಸೆ ಪಡೆದಿದ್ದ ರೋಗಿಗಳಿಗೂ ವೈದ್ಯರಿಂದ ಸೋಂಕು ತಗುಲಿರುವ ವಿಚಾರವಾಗಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಮೊಹಲ್ಲಾ ಕ್ಲಿನಿಕ್ಗಳು ಸಮುದಾಯ ಆರೋಗ್ಯ ಕೇಂದ್ರಗಳಾಗಿದ್ದು, ದೆಹಲಿ ಸರ್ಕಾರ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ ನೀಡಲು ಮೊಹಲ್ಲಾ ಕ್ಲಿನಿಕ್ ಪ್ರಾರಂಭಿಸಿತ್ತು.