ಪುದುಚೇರಿ, ಮಾ.26 (Daijiworld News/MSP) : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಹಿನ್ನಲೆಯಲ್ಲಿ ಶಾಸಕರೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಕೊರೊನಾ ವೈರಸ್ ಹರಡವಿಕೆಯನ್ನು ತಡೆಯಲೆಂದು ಪುದುಚೇರಿ ಸರ್ಕಾರ ಹೊರಡಿಸಿದ ಲಾಕ್ಡೌನ್ ಆದೇಶಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸ್ಥಳೀಯ ಕಾಂಗ್ರೆಸ್ ಶಾಸಕ ಜಾನ್ ಕುಮಾರ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಇವರು ನೆಲ್ಲಿಥೋಪ್ನಲ್ಲಿರುವ ತಮ್ಮ ನಿವಾಸದ ಬಳಿ 200 ಕ್ಕೂ ಹೆಚ್ಚು ಜನರನ್ನು ಗುಂಪುಗೂಡಿಸಿ ತರಕಾರಿ ಚೀಲಗಳನ್ನು ವಿತರಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಅವರು ಮಾರ್ಚ್ 31 ರವರೆಗೆ ಕೇಂದ್ರ ಪ್ರದೇಶದಲ್ಲಿ ಕರ್ಫ್ಯೂ ವಿಧಿಸುವುದಾಗಿ ಘೋಷಿಸಿದ್ದರು.