ನವದೆಹಲಿ, ಮಾ 26 (Daijiworld News/MSP) : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊರೊನಾ ವೈರಸ್ ಪರಿಹಾರದ ಭಾಗವಾಗಿ ಈ ಹಿಂದೆ ತಿಳಿಸಿರುವಂತೆ 1.70 ಲಕ್ಷ ಕೋಟಿ ರೂ. ಪರಿಹಾರ ರೂಪದಲ್ಲಿ ಕೇಂದ್ರ ಸರ್ಕಾರದ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ಸೋಂಕಿನ ವಿರುದ್ಧ ಹೋರಾಡುತ್ತಿರುವವರಿಗೆ, ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ದೇಶವು 21 ದಿನಗಳ ಲಾಕ್ಡೌನ್ನ 2 ನೇ ದಿನವನ್ನು ಪ್ರವೇಶಿಸುತ್ತಿದ್ದಂತೆ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು ಆರ್ಥಿಕ ಪ್ಯಾಕೇಜ್ ಅನ್ನು ಪ್ರಕಟಣೆ ಮಾಡಿದ್ದಾರೆ.ಸೋಂಕಿನ ವಿರುದ್ಧ ಹೋರಾಡುತ್ತಿರುವವರಿಗೆ, ಬಡವರಿಗೆ ನೆರವಾಗುವ ನಿಟ್ಟಿನಲ್ಲಿ 1.70 ಲಕ್ಷ ಕೋಟಿ ರೂ. ಪರಿಹಾರ ನಿಧಿ ಘೋಷಣೆ ಮಾಡಿದರು.
ಇವುಗಳ ವಿವರ ಇಲ್ಲಿದೆ
* ಪ್ರಧಾನಿ ಮಂತ್ರಿ ಗರೀಬ್ ಅನ್ನ ಯೋಜನೆಯನ್ನು ಘೋಷಿಸಲಾಗಿದ್ದು ಬಡವರಿಗೆ ಮುಂದಿನ ಮೂರು ತಿಂಗಳ ವರೆಗೆ ಪ್ರತಿಯೊಬ್ಬನಿಗೆ 5 ಕೆಜಿ ಅಕ್ಕಿ, ಅಥವಾ 5 ಕೆಜಿ ಗೋಧಿ, ಹಾಗೂ 1 ಕೆಜಿ ಧಾನ್ಯಗಳು ಉಚಿತವಾಗಿ ಸಿಗಲಿವೆ. ಇದರ ಲಾಭವನ್ನು 80 ಕೋಟಿ ಬಡ ಜನರು ಪಡೆಯಲಿದ್ದಾರೆ.
*ವೈದ್ಯರು, ನರ್ಸ್ ಸೇರಿದಂತೆ ಕೋರಾನ ವೈರಸ್ ವಿರುದ್ದ ಹೋರಾಡುತ್ತಿರುವರಿಗಾಗಿ 50 ಲಕ್ಷ ಆರೋಗ್ಯ ವಿಮೆ ಜಾರಿಗೆ ಗೊಳಿಸಲಾಗಿದೆ.
* 8.69 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ನೇರ ನಗದು ವರ್ಗಾವಣೆಯ ಮೂಲಕ ₹ 2000 ರ ಹಣ ವರ್ಗಾವಣೆ, ಏಪ್ರಿಲ್ ಮೊದಲ ವಾರದಲ್ಲಿ ಮೊದಲ ಕಂತು.
* 3 ಕೋಟಿ ಬಡ ಹಿರಿಯ ನಾಗರಿಕ, ಬಡ ವಿಧವೆಯರು ಮತ್ತು ಬಡ ಅಂಗವಿಕಲರಿಗೆ ₹1,000 ಪಿಂಚಣಿ, ಎರಡು ಕಂತುಗಳಲ್ಲಿ ಹಣ ಬಿಡುಗಡೆ, ಸುಮಾರು 3 ಕೋಟಿ ಜನರಿಗೆ ಲಾಭ.
* ಉಜ್ವಲಾ ಯೋಜನೆಯಡಿ ಮಹಿಳೆಯರಿಗೆ 3 ತಿಂಗಳವರೆಗೆ ಉಚಿತ ಸಿಲಿಂಡರ್ , 8 ಕೋಟಿ ಮಹಿಳೆಯರಿಗೆ ಇದರ ಲಾಭ.
* ಮುಂದಿನ ತಿಂಗಳು ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರಿಗೂ ಇಪಿಎಫ್ ಕೊಡುಗೆ.
* 63 ಲಕ್ಷ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ₹ 20 ಲಕ್ಷದ ತನಕ ಸಾಲ.
* ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ, 3.5 ಕೋಟಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಪರಿಹಾರ ಒದಗಿಸಲು ನಿಧಿಯನ್ನು (31,000 ಕೋಟಿ ರೂ.) ಬಳಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.
* ವೈದ್ಯಕೀಯ ಪರೀಕ್ಷೆ ಮತ್ತು ತಪಾಸಣೆ ಮತ್ತು ಆರೋಗ್ಯದ ಗಮನವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಬಳಿ ಇರುವ 31 ಸಾವಿರ ಕೋಟಿ ಹಣವನ್ನು ಬಳಕೆಗೆ ಮನವಿ.
* ಮುಂದಿನ 3 ತಿಂಗಳ ವರೆಗೂ ಮಹಿಳಾ ಜನ ಧನ್ ಖಾತೆ ಹೊಂದಿರುವವರು ಪ್ರತಿ ತಿಂಗಳಿಗೆ 500 ರೂ.