ಕಲಬುರಗಿ, ಮಾ.26 (Daijiworld News/MB) : ಲಾಕ್ ಡೌನ್ ಹಾಗೂ ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಮನೆಯಿಂದ ಹೊರಗೆ ಬಂದು ತಿರುಗಾಡುವವರಿಗೆ ಬುಧವಾರ ಬಸ್ಕಿ ಮತ್ತು 'ಕೋಳಿ' ಕೂಡುವ ಶಿಕ್ಷೆ ನೀಡಿದ್ದ ಕಲಬುರಗಿ ಪೊಲೀಸರು ಇವತ್ತು ಪೊರಕ ನೀಡಿ ರಸ್ತೆಗಳನ್ನು ಸ್ವಚ್ಛ ಮಾಡಿಸಿದ್ದಾರೆ.
ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿರುವ ಹಿನ್ನಲೆಯಲ್ಲಿ ದೇಶವನ್ನೇ ಲಾಕ್ಡೌನ್ ಮಾಡಲಾಗಿದ್ದರೂ ಅನಗತ್ಯವಾಗಿ ಮನೆಯಿಂದ ಹೊರ ಬಂದು ತಿರುಗಾಡುತ್ತಿದ್ದವರಿಗೆ ಪೊಲೀಸರು ಲಾಠಿ ಬೀಸಿ ಮನೆಗೆ ಕಳುಹಿಸುತ್ತಿದ್ದರು.
ಆದರೆ ಲಾಠಿ ಏಟು ಬಿದ್ದ ನಂತರವೂ ಬುಧವಾರ ಕೆಲವರು ತಿರುಗಾಡುತ್ತಿದ್ದು ಅವರಿಗೆ ರಸ್ತೆಯಲ್ಲೇ ಬಸ್ಕಿ ಹೊಡೆಯುವ ಶಿಕ್ಷೆ ನೀಡಲಾಗಿತ್ತು. ಆದರೆ ಆ ಬಳಿಕವೂ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ರಸ್ತೆ ಗುಡಿಸುವ ಶಿಕ್ಷೆ ನೀಡಲಾಗಿದೆ.