ನವದೆಹಲಿ, ಮಾ.26 (Daijiworld News/MB) : ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದ್ದು ಈವರೆಗೆ ಭಾರತದಲ್ಲಿ ಒಟ್ಟು ಪ್ರಕರಣಗಳು ೬೦೦ ದಾಟಿದ್ದು ಮೃತರ ಸಂಖ್ಯೆ 13ಕ್ಕೇರಿದೆ.
ಗುರುವಾರ ರಾಜಸ್ಥಾನದ ಭಿಲ್ವಾರದಲ್ಲಿ 73ರ ಹರೆಯದ ವ್ಯಕ್ತಿಯೊಬ್ಬರು ಕೋವಿಡ್- 19 ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಇವರಿಗೆ ಬೇರೆ ಕಾಯಿಲೆಗಳು ಕೂಡಾ ಇತ್ತು ಎಂದು ರಾಜಸ್ಥಾನದ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಅದೇ ವೇಳೆ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಜೈಪುರದ 45ರ ಹರೆಯದ ವ್ಯಕ್ತಿ ಮತ್ತು ಜುನ್ಜುನ್ನ 35ರ ಹರೆಯದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ, ಇವರಿಬ್ಬರೂ ವಿದೇಶಕ್ಕೆ ಹೋಗಿ ಬಂದವರಾಗಿದ್ದಾರೆ. ಇವರು ಸಂಪರ್ಕ ಹೊಂದಿರುವ ಎಲ್ಲ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಇಲ್ಲಿಯವರೆಗೆ ರಾಜಸ್ಥಾನದಲ್ಲಿ 40 ಪ್ರಕರಣಗಳು ವರದಿಯಾಗಿವೆ.
ಇನ್ನು ಕರ್ನಾಟಕದಲ್ಲಿ ಇಂದು ಒಂದು ಸಾವಾಗಿದ್ದು ಒಟ್ಟು ಮೃತರ ಸಂಖ್ಯೆ 2 ಕ್ಕೇರಿದೆ.