ನವದೆಹಲಿ, ಮಾ.27 (DaijiworldNews/PY) : ವ್ಯಕ್ತಿಯೋರ್ವ ತನಗ ಕೊರೊನಾ ವೈರಸ್ ಸೋಂಕು ಇದೆಯೆಂದು ಭಾವಿಸಿ ಆಸ್ಪತ್ರೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ವ್ಯಕ್ತಿಗೆ ಕೊರೊನಾ ಸೋಂಕು ಲಕ್ಷಣಗಳು ಇರಲಿಲ್ಲ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಭಾರತಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಿಂದ ಆಗಮಿಸಿದ್ದ ಯುವಕನನ್ನು ಕೊರೊನಾ ವೈರಸ್ ಸೋಂಕು ಶಂಕೆಯಿಂದ ಮಾ. 18ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ತನಗೆ ಕೊರೊನಾ ವೈರಸ್ ಸೋಂಕು ಇದೆ ಎಂದು ಭಯಪಟ್ಟು ವೈದ್ಯಕೀಯ ವರದಿ ಬರುವುದರೊಳಗೆ ಆಸ್ಪತ್ರೆಯ ಏಳನೇ ಮಹಡಿಯಿಂದ ಜಿಗಿದು ಆತ್ಯಹತ್ಯೆ ಮಾಡಿಕೊಂಡಿದ್ದ. ಸದ್ಯ ಆತನ ಗಂಟಲು ದ್ರವ ವರದಿ ಬಂದಿದ್ದು, ಆ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಇರಲಿಲ್ಲ ಎಂದು ದೃಢವಾಗಿದೆ.
ಪಂಜಾಬ್ ಮೂಲದವನಾಗಿರುವ 23 ವರ್ಷದ ಯುವಕನನ್ನು ಕೊರೊನಾ ಸೋಂಕು ಶಂಕೆಯಿಂದ ದೆಹಲಿಯ ಇ೦ದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆತಂದು ಆಸ್ಪತ್ರೆಗ ದಾಖಲಿಸಲಾಗಿತ್ತು.
ಆದರೆ, ಆಸ್ಪತ್ರೆಯ ವಿರುದ್ದ ಆತ ನ ಮನೆಯವರು ದೂರು ದಾಖಲಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ತಮ್ಮ ಮಗನಿಗೆ ಸಾವಿನ ಭಯ ಮೂಡಿಸಿದ್ದಾರೆ. ನಮಗೆ ಆತನನ್ನು ಭೇಟಿಯಾಗಲೂ ಅವಕಾಶ ನೀಡಿಲ್ಲ. ಆತ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.