ನವದೆಹಲಿ, ಮಾ.27 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ ವಿರುದ್ದ ಹೋರಾಡಲು ಫೇಸ್ಬುಕ್ ಮೆಸೆಂಜರ್ನಲ್ಲಿ ಹೆಲ್ಪ್ ಡೆಸ್ಕ್ ಒಂದನ್ನು ಆರೋಗ್ಯ ಸಚಿವಾಲಯ ಆರಂಭಿಸಿದೆ. ಈ ಹೆಲ್ಪ್ ಡೆಸ್ಕ್ ಕೊರೊನಾ ವೈರಸ್ನ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.
ಕೊರೊನಾ ವೈರಸ್ ವಿರುದ್ದ ಹೋರಾಡಲು ಈ ಸಹಾಯವಾಣಿ ಯಾವುದೆಲ್ಲಾ ಕ್ರಮಗಳನ್ನ ಅನುಸರಿಸಬೇಕು ಎಂಬುದರ ಕುರಿತು ಸಂಪೂರ್ಣವಾದ ಮಾಹಿತಿ ನೀಡುತ್ತದೆ. ಈ ಬಗ್ಗೆ MyGov ನ ಸಿಇಓ ಅಭಿಷೇಕ್ ಸಿಂಗ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ
">http://M.me/MyGovIndia https://facebook.com/MyGovIndia/ ಈ ಲಿಂಕ್ ಮೂಲಕ ನಿಮಗೆ ಬೇಕಾದ ಅಗತ್ಯ ಮಾಹಿತಿ ಪಡೆಯಬಹುದು.
ಈ ಮೊದಲು ಭಾರತ ಸರ್ಕಾರ ವಾಟ್ಸಾಪ್ನಲ್ಲಿ ಕೊರೊನಾ ವೈರಸ್ ವಿರುದ್ದ ಜನರಲ್ಲಿ ಅರಿವು ಮೂಡಿಸಲು +919013151515 ಎಂಬ ಸಹಾಯವಾಣಿ ಸಂಖ್ಯೆ ಯನ್ನು ಕೂಡ ಆರಂಭಿಸಿತ್ತು. ಇದರಲ್ಲಿ ವೈರಸ್ ಹರಡುವ ವಿಧಾನ ಸೇರಿದಂತೆ, ಮುಖ್ಯವಾಗಿ ಸಾರ್ವಜನಿಕರಿ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಸೇರಿದಂತೆ ಹಲವಾರು ಮಾಹಿತಿಗಳನ್ನು ನೀಡಲಾಗುತ್ತಿದೆ.
ಕೊರೊನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸಿದ್ದು, ಸರ್ಕಾರಗಳು ಹಲವಾರು ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಪಿ ಜಾಗೃತಿ ಮೂಡಿಸುತ್ತಿದೆ.
MyGov launched its Corona Helpdesk chatbot on #Facebook #messenger to get update information and dos and Donts to prevent the spread of #COVID19.https://t.co/ZvEoT1REWk.
Like the MyGov Facebook at https://t.co/ZvEoT1REWk.
Check out the chatbot on https://t.co/F7A2ornmw3#IndiaFightsCorona
— abhishek singh (@abhish18) March 26, 2020