ನವದೆಹಲಿ, ಮಾ 27 (Daijiworld News/MSP): ಹೆಚ್ಚುತ್ತಿರುವ ಕೋವಿಡ್–19 ರೋಗಿಗಳ ದೃಷ್ಟಿಯಿಂದ ಭಾರತೀಯ ರೈಲ್ವೆ ಇಲಾಖೆಯ ಬೋಗಿಗಳ ತಯಾರಿಕಾ ಘಟಕಗಳಲ್ಲಿ ಬೋಗಿಗಳನ್ನು ಮತ್ತು ಕ್ಯಾಬಿನ್ಗಳನ್ನು ಪ್ರತ್ಯೇಕ ಆಸ್ಪತ್ರೆ ವಾರ್ಡ್ಗಳಾಗಿ ಪರಿವರ್ತಿಸಲು ಚಿಂತಿಸುತ್ತಿದೆ ಎಂದು ರೈಲ್ವೇ ಸಚಿವಾಲಯದ ಮೂಲಗಳು ತಿಳಿಸಿವೆ.
ಹೀಗೆ ಪರಿವರ್ತಿತ ಬೋಗಿಗಳನ್ನು ಆಸ್ಪತ್ರೆಯ ಸೌಕರ್ಯಗಳಿಂದ ವಂಚಿತವಾಗಿರುವ, ಹಳ್ಳಿಗಳ ಕಡೆಗೆ ರವಾನಿಸಿ ಅಲ್ಲಿನ ಕೊರೊನಾ ಪೀಡಿತರಿಗೆ ಸೂಕ್ತ ಚಿಕಿತ್ಸೆ, ಪರೀಕ್ಷಾ ಸೌಲಭ್ಯ ಕಲ್ಪಿಸುವ ನಿರ್ಧಾರಕ್ಕೆ ಬರಲಾಗಿದೆ. ಜೊತೆಗೆ ಚಿಕಿತ್ಸೆಗೆ ನೆರವಾಗುವ ವೆಂಟಿಲೇಟರ್ಗಳನ್ನೂ ನಿರ್ಮಿಸಲು ನಿರ್ಧರಿಸಿದೆ.
ಮೂಲಗಳ ಪ್ರಕಾರ, ಖಾಲಿ ಬೋಗಿಗಳು ಮತ್ತು ಕ್ಯಾಬಿನ್ಗಳನ್ನು ಪ್ರತ್ಯೇಕ ವಾರ್ಡ್ಗಳಾಗಿ ಬಳಸುವ ಪ್ರಸ್ತಾಪವನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್, ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್, ಎಲ್ಲಾ ವಲಯಗಳ ಜನರಲ್ ಮ್ಯಾನೇಜರ್ಗಳು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರೊಂದಿಗೆ ಬುಧವಾರ ವಿಡಿಯೋ ಕಾನ್ಫರೆನ್ಸಿಂಗ್ ಕುರಿತು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ರೈಲ್ವೆ ಬೋಗಿಗಳು ಮತ್ತು ಕ್ಯಾಬಿನ್ಗಳನ್ನು ವೈದ್ಯಕೀಯ ಸಮಾಲೋಚನಾ ಕೊಠಡಿಗಳು, ಮೆಡಿಕಲ್ ಶಾಪ್, ಐಸಿಯು ಹೀಗೆ ತಾತ್ಕಾಲಿಕ ಆಸ್ಪತ್ರೆಯಾಗಿ ಪರಿವರ್ತಿಸಬಹುದು. ಮಾತ್ರವಲ್ಲದೆ ಇಂತಹ ಪರಿವರ್ತಿತ ಆಸ್ಪತ್ರೆಗಳನ್ನು ಕೊರೊನಾ ವೈರಸ್ ಪ್ರಕರಣಗಳು ಶೀಘ್ರವಾಗಿ ಹೆಚ್ಚುತ್ತಿರುವ ಭಾಗಗಳಿಗೆ ಈ ಬೋಗಿಗಳನ್ನು ಕಳುಹಿಸಬಹುದು ಎಂದು ಯಾದವ್ ಹೇಳಿದರು.
ರೈಲ್ವೆ ಇಲಾಖೆ ಯೂ ಪ್ರತಿದಿನ 13,523 ರೈಲುಗಳನ್ನು ಓಡಿಸುತ್ತಿದ್ದು ದೇಶಾದ್ಯಂತದ ಲಾಕ್ಡೌನ್ ದೃಷ್ಟಿಯಿಂದ ಏ.14 ರವರೆಗೆ ಎಲ್ಲಾ ಪ್ರಯಾಣಿಕರ ಸೇವೆಗಳನ್ನು ಸ್ಥಗಿತಗೊಳಿಸಿದೆ. ಡಬ್ಲ್ಯುಎಚ್ಒ ಅಂದಾಜಿನ ಪ್ರಕಾರ, ಭಾರತವು 1,000 ಜನರಿಗೆ 0.7 ಹಾಸಿಗೆಗಳನ್ನು ಮಾತ್ರ ಹೊಂದಿದೆ. ಇದನ್ನು ಎರಡು ಹಾಸಿಗೆಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದರೆ, ಡಬ್ಲ್ಯುಎಚ್ಒ ದೇಶದ 1,000 ಜನರಿಗೆ ಕನಿಷ್ಠ 3 ಹಾಸಿಗೆಗಳನ್ನು ಒದಗಿಸುವಂತೆ ಆದೇಶಿಸಿದೆ.