ಕೋಲ್ಕತ್ತಾ, ಮಾ.27 (Daijiworld News/MB) : ಕೋಲ್ಕತ್ತಾದ ಮಾರುಕಟ್ಟೆಗೆ ಗುರುವಾರ ತೆರಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಲ್ಲಿನ ಅಂಗಡಿಗಳ ಮುಂಭಾಗದಲ್ಲಿ ಸಾಮಾಜಿಕ ಅಂತರದ ವೃತ್ತ ಬರೆಯುವ ಮೂಲಕ ಕೊರೊನಾ ವಿರುದ್ಧದ ಜಾಗೃತಿ ಮೂಡಿಸಿದ್ದಾರೆ.
ಇದೀಗ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವೃತ್ತ ಬರೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೆಟ್ಟಿಗರು ದೀದಿಯ ಈ ಕಾರ್ಯಕ್ಕೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈ ವರೆಗೆ 11 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ.