ಬೆಂಗಳೂರು, ಮಾ.27 (DaijiworldNews/PY) : "ಪಕ್ಷದ ಕಡೆಯಿಂದ ನಾವು ಸಹಾಯವಾಣಿಯನ್ನು ತೆರೆದು ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ. ಟಾಸ್ಕ್ಪೋರ್ಸ ಅನ್ನು ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ರಚಿಸಿದ್ದೇವೆ. ಏನು ಮಾಡಬೇಕು ಎಂಬುದನ್ನು ಈ ಟಾಸ್ಕ್ಪೋರ್ಸ್ ನೋಡಿಕೊಳ್ಳುತ್ತದೆ. ಕೊರೊನಾ ಎಫೆಕ್ಟ್ನಿಂದ ಜನರಿಗೆ ಬೇಕಾದ ಸೌಲಭ್ಯ ಕಲ್ಪಿಸಿಕೊಡಲಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸಿದ್ದರಾಮಯ್ಯ ಅವರೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾವು ಇಎಂಐ ಮುಂದಕ್ಕೆ ಹಾಕುವಂತೆ ಹೇಳಿದ್ದೆವು. ಕೇಂದ್ರ ಸರ್ಕಾರ ಅದಕ್ಕೆ ಸ್ಪಂದಿಸಿದೆ. ಕೇಂದ್ರ ಸರ್ಕಾರಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಕೊರೊನಾ ಸೋಂಕು ರಾಜ್ಯದಲ್ಲಿ ಅಧಿಕವಾಗಿತ್ತಿದೆ. ಹಾಗಾಗಿ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ, ಸರ್ವಪಕ್ಷ ಸಭೆ ಇಲ್ಲಿಯವರೆಗೆ ಕರೆದಿಲ್ಲ. ಸರ್ಕಾರ ಸಂಪೂರ್ಣ ವಿಫಲವಾಗಿದೆ" ಎಂದರು.
"ಸರಿಯಾದ ಕಿಟ್ ವ್ಯವಸ್ಥೆ ಆಸ್ಪತ್ರೆಗಳಲ್ಲಿ ಇಲ್ಲ. ಸಾಕಷ್ಟು ಸಮಸ್ಯೆ ಅಲ್ಲಿದೆ. ಸರ್ಕಾರ ಅದನ್ನು ಪರಿಹರಿಸಲು ಒದ್ದಾಡುತ್ತಿದೆ. ರೇಷ್ಮೆ ಸೇರಿದಂತೆ ರೈತರು ಬೆಳೆದ ಬೆಳೆಗಳಿಗೆ ಬೆಲೆ ದೊರಕುತ್ತಿಲ್ಲ. ತಕ್ಷಣವೇ ಓಪನ್ ಮಾಡಿಸಬೇಕು. ಪದಾರ್ಥಗಳನ್ನು ಹೆಚ್ಚು ದಿನ ಇಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಸಕಾಆರ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ನಾವು ಸರ್ಕಾರಕ್ಕೆ ಇದರ ಬಗ್ಗೆ ಒತ್ತಾಯಿಸುತ್ತೇವೆ" ಎಂದು ಹೇಳಿದರು.
"ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ವಿಪಕ್ಷಗಳನ್ನು ಇಲ್ಲಿಯವರೆಗೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು. ಸರ್ಕಾರಕ್ಕೆ ನಾವು ಸಂಪೂರ್ಣ ಸಹಕಾರ ಕೊಡುತ್ತೇವೆ. ಪ್ರತಿ ಶಾಸಕರು, ಎಂಎಲ್ಸಿಗಳು ಒಂದು ಲಕ್ಷ ನೀಡಬೇಕು. ಇರುವವರು ಹೆಚ್ಚು ಕೊಟ್ಟರೂ ಪರವಾಗಿಲ್ಲ. ನಾವು ಇದನ್ನ ಕೊರೊನಾ ಸಮಸ್ಯೆಗೆ ಉಪಯೋಗಿಸಿಕೊಳ್ಳುತ್ತೇವೆ. ಆದರೆ, ನಮ್ಮ ಕಾರ್ಯಕರ್ತರು ನೇರವಾಗಿ ಜನರ ಬಳಿ ಹೋಗಬಾರದು. ಪಕ್ಷದ ಜಿಲ್ಲಾ ಕಚೇರಿಗೆ ಅಂತವರು ನೀಡಬೇಕು" ಎಂದರು.
"ಎಲ್ಲಾ ಕಡೆ ಮಹಾಮಾರಿ ಕೊರೊನಾ ಹಬ್ಬಿದೆ. ಜನರನ್ನು ಆತಂಕಗೊಳಿಸಿದೆ. 21 ದಿನ ಪ್ರಧಾನಿಯವರು ದೇಶ ಲಾಕಡೌನ್ ಘೋಷಿಸಿದ್ದಾರೆ. ನಮ್ಮ ಪಕ್ಷ ಇದನ್ನು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದೆ. ಸರ್ಕಾರ ತಡವಾಗಿಯಾದರೂ ಉತ್ತಮ ತೀರ್ಮಾನ ಕೈಗೊಂಡಿದೆ. ಕೊರೊನಾ ವೈರಸ್ಗೆ ಔಷಧಿಯೇ ಇಲ್ಲ. ಅದಕ್ಕೆ ಸಾಮಾಜಿಕ ಅಂತರಕಾಯ್ದುಕೊಳ್ಳಬೇಕು" ಎಂದರು.
"ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ. ಪ್ರಧಾನಿ ನಿಲುವನ್ನು ಅಭಿನಂದಿಸಿ, ಸಲಹೆ ಕೊಟ್ಟಿದ್ದಾರೆ. ಚಿದಂಬರಂ ಕೂಡ 10 ಸಲಹೆಗಳನ್ನು ಕೇಂದ್ರಕ್ಕೆ ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ನಿನ್ನೆ ಕೆಲವು ಘೋಷಣೆ ಮಾಡಿದ್ದಾರೆ. ಆರ್ಬಿಐ ಗವರ್ನರ್ ಇಎಂಐ ಅನ್ನು ಮೂರು ತಿಂಗಳು ಮುಂದೂಡಿದ್ದನ್ನು ಸ್ವಾಗತಿಸುತ್ತೇವೆ" ಎಂದು ತಿಳಿಸಿದರು.
"ಹಾಫ್ಕಾಮ್ಸ್ ಮೂಲಕ ರೈತರ ಬೆಳೆಗಳನ್ನು ಖರೀದಿಸಬೇಕು. ರೇಷ್ಮೆ ಗೂಡನ್ನು ಖರೀದಿಸಬೇಕು. ಗುಡನ್ನು ಹೆಚ್ಚುದಿನ ಶೇಖರಿಸೋಕೆ ಸಾಧ್ಯವಿಲ್ಲ. ಹಳೆ ಮೈಸೂರು ಭಾಗದಲ್ಲಿ ಫ್ರೀ ಮಾನ್ಸೂನ್ ಆಗುತ್ತದೆ. ಇಂದಿರಾ ಕ್ಯಾಂಟೀನ್ ಮಾಡಿದ್ದು ನಿರ್ಗತಿಕರು, ಬಡವರಿಗಾಗಿ. 3,80,400 ಕ್ಯಾಂಟೀನ್ ರಾಜ್ಯದಲ್ಲಿ ಇವೆ. ಯಾವುದೇ ಕಾರಣಕ್ಕೂ ಅವುಗಳನ್ನು ಮುಚ್ಚಬಾರದು. ಎರಡು ತಿಂಗಳು ಪಡಿತರ ಕೊಡುತ್ತೇವೆ ಎಂದಿರುವುದನ್ನು ಈಗಲೇ ಆರಂಭಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಪಡಿತರ ಕಡಿಮೆ ದರದಲ್ಲಿ ನೀಡಲು ನಿರ್ಮಲಾ ಸೀತಾರಾಮನ್ ಹೇಳಿದ್ದು, ಅವರು ನಮ್ಮದೇ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಇದು ಒಳ್ಳೆಯದು ಅಭಿನಂದನೆ ಸಲ್ಲಿಸುತ್ತೇವೆ" ಎಂದು ಹೇಳಿದರು.
"ಮನೆ ಮನೆಗೆ ಹೋಗಿ ಜನರಿಗೆ ಮಾಸ್ಕ್ "ಮಾಡುತ್ತಾರೋ ಗೊತ್ತಿಲ್ಲ. 200/300 ಐಸೋಲೇಶನ್ ವಾರ್ಡ್ ಪ್ರತಿ ಜಿಲ್ಲೆಯಲ್ಲಿ ನಿರ್ಮಿಸಬೇಕು. ಇನ್ನೂ ಸೋಂಕಿತರು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಈಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು" ಎಂದು ತಿಳಿಸಿದರು.