ತ್ರಿಶೂರ್ ಮಾ 27 (Daijiworld News/MSP): ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ವಸ್ತುಗಳ ಮಾರಾಟ ಬಿಟ್ಟು ಎಲ್ಲಾವನ್ನು ಮುಚ್ಚುವಂತೆ ಸೂಚಿಸಲಾಗಿದ್ದು 21 ದಿನಗಳ ಲಾಕ್ ಡೌನ್ ಭಾರತದಲ್ಲಿ ಘೋಷಿಸಲಾಗಿದೆ. ಆದರೂ ಅಗತ್ಯ ವಸ್ತುಗಳ ಜನಸಾಮಾನ್ಯರಿಗೆ ಸಿಗದೆ ಪರದಾಡುತ್ತಿದ್ದರೆ. ಇದೆಲ್ಲಕ್ಕಿಂತಲೂ ಮದ್ಯಪಾನ ಪ್ರಿಯರಿಗೆ ಬೇರೆಯೇ ಚಿಂತೆ, ಅದೆಷ್ಟೋ ಕುಡುಕರು ಕುಡಿಯುವುದಕ್ಕೆ ಮದ್ಯಪಾನ ಸಿಗುತ್ತಿಲ್ಲ ಎಂದು ಕೊರೊನಾ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಇನ್ನು ಕೇರಳದಲ್ಲಿ ಕುಡುಕನೋರ್ವ ಮದ್ಯಪಾನ ನಿಷೇಧ ಮಾಡಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಕೇರಳ ಕೊರೊನಾ ಸೋಮ್ಕಿತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದ್ದು, ಮದ್ಯಪಾನವನ್ನು ಸಂಪೂರ್ಣ ಬಂದ್ ಮಾಡಿ ಇಡೀ ರಾಜ್ಯವನ್ನು ಲಾಕ್ಡೌನ್ ಮಾಡಿದೆ. ಈ ಹಿನ್ನಲೆಯಲ್ಲಿ ಕುಡಿಯಲು ಮಧ್ಯ ಸಿಗದೆ ತ್ರಿಶೂರ್ ಜಿಲ್ಲೆಯ ಕುನ್ನಕುಲಂನಲ್ಲಿ 38 ವರ್ಷದ ಸನೋಜ್ ಕುಲಂಗರ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಆತನ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು, ಸನೋಜ್ ಗೆ ಕುಡಿತ ಅಭ್ಯಾಸವಿತ್ತು. ಮದ್ಯಪಾನ ನಿಷೇಧದ ಬಳಿಕ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದನು. ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಈ ನಡುವೆ ಕುಡಿತದ ಚಟಕ್ಕೆ ಬಿದ್ದಿರುವ ವ್ಯಕ್ತಿಗಳು ಮದ್ಯಪಾನ ಸಿಗದ ಹಿನ್ನೆಲೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.