ನವದೆಹಲಿ, ಮಾ.27 (DaijiworldNews/PY) : ಕೊರೊನಾ ಹರಡುವುದನ್ನು ತಡೆಯಲು ಮನೆಯಲ್ಲೇ ಇರಿ ಎಂಬ ಸಂದೇಶವನ್ನು ಸಾರುವ ಬಾಲಕಿಯ ವಿಡಿಯೋವೊಂದನ್ನು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಅಪ್ಪನಿಗೆ ಪತ್ರ ಬರೆಯುವ ಈ ಪುಟ್ಟ ಬಾಲಕಿ, ಅಪ್ಪ ನಾನು, ಅಮ್ಮ ನಿಮ್ಮನ್ನು ಮಿಸ್ ಮಾಡುತ್ತಿಲ್ಲ. ನೀವು ಮನೆಗೆ ದೌಡಾಯಿಸಿ ಬರಬೇಕೆಂದಿಲ್ಲ. ಅದರ ಅಗತ್ಯವೂ ಇಲ್ಲ. ನೀವು ಎಲ್ಲಿದ್ದೀರೋ ಅಲ್ಲೇ ಇರಿ. ನೀವು ಹೊರಗೆ ಬಂದರೆ ಕೊರೊನಾ ಗೆಲ್ಲುತ್ತದೆ. ನಾವು ಕೊರೊನಾವನ್ನು ಸೋಲಿಸಬೇಕಿದೆ ಅಲ್ವಾ ಅಪ್ಪ ಎಂದು ಹೇಳುವ ವಿಡಿಯೋ ಇದಾಗಿದೆ. ಮನೆಯಿಂದ ಹಿರಿಯರು ಹೊರಹೋಗದಂತೆ ಮಕ್ಕಳಿ ನಿಗಾ ವಹಿಸಬೇಕು ಎಂಬ ಸಂದೇಶವಿರುವ ವಿಡಿಯೋದಲ್ಲಿ ನೀವೂ ಇದೇ ರೀತಿ ಕೊರೊನಾ ವಾರಿಯರ್ಸ್ ಆಗಿ ಎಂದಿದೆ.
ಈ ವಿಡಿಯೋವನ್ನು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದು ದಿನದ ಹಿಂದೆಯಷ್ಟೆ ಬಾಲಕನೋರ್ವ ಅಮ್ಮ ಹೊರಗೆ ಹೋಗುವುದನ್ನು ತಡೆಯುವ ವಿಡಿಯೋವೊಂದನ್ನು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದರು. ಭಾರತದ ಯುವ ಜನಾಂಗ ಮುಂದಿನ ಆರೋಗ್ಯಕರ ನಾಳೆಗಳಿಗೆ ದಾರಿ ತೋರಿಸಲಿದೆ ಎಂಬುದು ನನ್ನ ನಂಬಿಕೆ ಎಂದು ಹೇಳಿದ್ದರು.