ರಾಯಚೂರು,ಮಾ 28 (Daijiworld News/MSP) : ಕೊರೊನಾ ವೈರಸ್ ಸೋಂಕನ್ನು ತಡೆಯಲು ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಉಲ್ಲಂಘಿಸಿ ವಿನಾಕಾರಣ ರಸ್ತೆಗಿಳಿದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಸಾಂದರ್ಭಿಕ ಚಿತ್ರ
೧೦೫ ಬೈಕ್ಗಳನ್ನು ವಶಪಡಿಸಿಕೊಂಡು, ದ್ವಿಚಕ್ರವಾಹನಗಳ ಮೇಲೆ ಸಂಚರಿಸುತ್ತಿದ್ದ ೮೫ ಜನರ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಂಡಿದೆ. ವಶ ಪಡಿಸಿಕೊಂಡಿರುವ ಬೈಕ್ಗಳನ್ನು ಮುಂದಿನ ಏಪ್ರೀಲ್ ೧೪ರ ವರೆಗೆ ವಾಹನಗಳನ್ನು ಹಸ್ತಾಂತರಿಸಲಾಗುವುದಿಲ್ಲ. ವಾಹನ ಸವಾರರ್ ಮೇಲೆ ಲಘು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಯಾರೂ ಇಂತಹ ಸಮಸ್ಯೆಗಳಿಗೆ ಎಡೆಮಾಡಿಕೊಡದೆ ಅತಿ ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಗಡೆ ಬನ್ನಿ. ಇದೇ ರೀತಿಯ ಕಾರ್ಯಾಚರಣೆಯನ್ನು ಜಿಲ್ಲಾದ್ಯಾಂತ ಕೈಗೊಂಡು ಒಟ್ಟಾರೆ ೧೦೫ ಮೋಟಾರು ಸೈಕಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ೮೫ ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ವೇದಮೂರ್ತಿ ಅವರು ತಿಳಿಸಿದ್ದಾರೆ.
ಹಿರಿಯ ನಾಗರೀಕರ ಆರೈಕೆ, ದೇವದಾಸಿ ನಿರ್ಮೂಲನೆ, ವಿಕಲಚೇತನ ಕ್ಷೇಮಾಭಿವೃದ್ಧಿ ಸೇರಿದಂತೆ ಇನ್ನಿತರ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಘಗಳನ್ನು ಗುರುತಿಸಿ ಅವರ ಸೇವೆ ಪಡೆಯಬೇಕೆಂದು ಸೂಚಿಸಲಾಗಿದೆ.
ಸ್ವಚ್ಛತಾಗಾರರು ಮತ್ತು ಘನತ್ಯಾಜ್ಯ ನಿರ್ವಹಣಾ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಸುರಕ್ಷತಾ ಸಾಮಾಗ್ರಿಗಳಾದ ಮಾಸ್ಕ್, ಗ್ಲೌಸ್, ಮತ್ತು ಪುಟ್ ವೇರ್ ನೀಡಬೇಕೆಂದು ಡಾ.ಸಿ.ವೇದಮೂರ್ತಿ ತಿಳಿಸಿದರು.