ಡುಮ್ಕಾ, ಮಾ.28 (Daijiworld News/MB) : ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ಡೌನ್ ಘೋಷಿಸಲಾಗಿದ್ದು ಬಸ್ ಇಲ್ಲದ ಕಾರಣದಿಂದಾಗಿ ಮನೆಗೆ ಹೋಗಲು ಡ್ರಾಪ್ ಕೇಳಿದ 16 ವರ್ಷದ ಬಾಲಕಿಯನ್ನು ಸ್ನೇಹಿತ ಸೇರಿದಂತೆ 10 ಜನರು ಅತ್ಯಾಚಾರ ಮಾಡಿರುವ ಘಟನೆ ಜಾರ್ಖಂಡ್ನ ಡುಮ್ಕಾದಲ್ಲಿ ನಡೆದಿದೆ.
ಬಾಲಕಿ ಡುಮ್ಕಾದಿಂದ ಮನೆಗೆ ಹಿಂತಿರುಗುತಿದ್ದ ಸಂದರ್ಭದಲ್ಲಿ ತನ್ನ ಸ್ನೇಹಿತನನ್ನು ಕರೆದು ಮನೆಗೆ ಡ್ರಾಪ್ ಕೊಡುವಂತೆ ಕೇಳಿದ್ದಾಳೆ. ಆ ಸಂದರ್ಭದಲ್ಲಿ ಆಕೆಯ ಸ್ರೇಹಿತ ಇತರ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಾಗಿ ಎಫ್ಐಆರ್ ದಾಖಲಿಸಲಾಗಿದ್ದು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಸೂಪರಿಂಟೆಂಡೆಂಟ್ ವೈ.ಎಸ್. ರಮೇಶ್ ತಿಳಿಸಿದ್ದಾರೆ.
ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.