ಕೊಚ್ಚಿ,ಮಾ.28 (Daijiworld News/MB) : ದೇಶದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಕೇರಳದಲ್ಲಿ ಮೊದಲ ಬಲಿಯಾಗಿದೆ.
ಕೊಚ್ಚಿ ಮೂಲದ 69 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ಮೃತ ಸೋಂಕಿತ ವ್ಯಕ್ತಿ ಮಾರ್ಚ್ 16 ರಂದು ದುಬೈನಿಂದ ಬಂದಿದ್ದು ಮಾರ್ಚ್ 22 ರಂದು ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹಾಗೆಯೇ ಅವರಿಗೆ ಹೃದಯ ಕಾಯಿಲೆ ಹಾಗೂ ರದ್ತದೊತ್ತಡವಿದ್ದು ಅದರ ಚಿಕಿತ್ಸೆಯೂ ನೀಡಲಾಗುತ್ತಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.
ಮೃತ ವ್ಯಕ್ತಿ ಕೇರಳಕ್ಕೆ ಬಂದಿರುವ ವಿಮಾನದಲ್ಲಿದ್ದ 49 ಪ್ರಯಾಣಿಕರನ್ನು ಕ್ವಾರೆಂಟೈನ್ನಲ್ಲಿ ಇಡಲಾಗಿದ್ದು ಅವರನ್ನು ವಿಮಾನ ನಿಲ್ದಾಣದಿಂದ ಕರೆತಂದ ಚಾಲಕನಿಗೂ ಕೂಡಾ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.
ಕೇರಳದಲ್ಲಿ ಈವರೆಗೆ 137 ಸೋಂಕು ತಗುಲಿದೆ.