ಬೆಂಗಳೂರು, ಮಾ.28 (DaijiworldNews/PY) : ಹೋಂಕ್ವಾರಂಟೈನ್ ಉಲ್ಲಂಘಿಸಿ ಬೀದಿಗಳಲ್ಲಿ ತಿರುಗುತ್ತಾ ಜನರಲ್ಲಿ ಆತಂಕ ಮೂಡಿಸಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿಯ 27ವರ್ಷದ ವ್ಯಕ್ತಿಗೆ ಹೋಂಕ್ವಾರಂಟೈನ್ ಮುದ್ರೆ ಹಾಕಾಲಾಗಿದ್ದು, ಹಾಗಿದ್ದರೂ ಆತ ಸುಮಾರು ಮೂರು ಬಾರಿ ಮನೆಯಿಂದ ಹೊರಗೆ ಬಂದು ತಿರುಗಾಡುತ್ತಿದ್ದ. ಹಾಗಾಗಿ ಅವನ ವಿರುದ್ದ ಎಫ್ಆರ್ ದಾಖಲಿಸಿ ಬಂಧಿಸಿದ್ದಾರೆ. ಹೋಂಕ್ವಾರಂಟೈನ್ನಲ್ಲಿ ಇರಬೇಕಾದ ವ್ಯಕ್ತಿ ಜಾಲಹಳ್ಳಿ ಹಾಗೂ ಸುತ್ತಮುತ್ತ ಓಡಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿ ಇಂಡೋನೇಷ್ಯಾದಿಂದ ಮಾ.17ರಂದು ಬಂದಿದ್ದ ವ್ಯಕ್ತಿಯ ಕೈಗೆ ಮುದ್ರ ಹಾಕಲಾಗಿತ್ತು.
ಆತ ನಿಷೇಧಾಜ್ಞೆಯ ಮಧ್ಯೆಯೂ ಬುಧವಾರ ಬೆಳಿಗ್ಗೆ ಜಾಲಹಳ್ಳಿ ಸಮೀಪ ಓಡಾಡುತ್ತಿದ್ದ. ಪೊಲೀಸರು ಆತನ ಕೈ ಮೇಲಿದ್ದ ಮುದ್ರೆ ನೋಡಿದ್ದು, ಆತನನ್ನು ಪ್ರಶ್ನಿಸಿದ್ದರು. ಆತ ನಗರ ಸುತ್ತುಲು ಬಂದಿರುವುದಾಗಿ ಹೇಳಿದ್ದ. ಆತನನ್ನು ಬಳಿಕ ವಶಕ್ಕೆ ತೆಗೆದುಕೊಂಡ ಪೊಲೀಸರು, ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಜಾಲಹಳ್ಳಿ ಠಾಣೆಯಲ್ಲಿ ಆತನ ವಿರುದ್ದ ಪ್ರಕರಣ ದಾಖಲಾಗಿದೆ.