ತಮಿಳುನಾಡು, ಮಾ.28 (DaijiworldNews/PY) : ಕ್ವಾರಂಟೈನ್ನಿಂದ ತಪ್ಪಿಸಿಕೊಂಡಿದ್ದ 24 ವರ್ಷದ ಯುವಕನೋರ್ವನನ್ನು ಪೊಲೀಸರು ಆತನ ಪ್ರೇಯಸಿಯ ಮನೆಯಲ್ಲಿ ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ದುಬೈನಿಂದ ಬಂದಿದ್ದ ತಮಿಳುನಾಡಿನ ಯುವಕನನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಆದರೆ, ಆ ಯುವಕ ಅಲ್ಲಿಂದ ತಪ್ಪಿಸಿಕೊಂಡು ಯಾರಿಗೂ ಕಾಣದಂತೆ ತನ್ನ ಪ್ರೇಯಸಿಯ ಮನೆ ಸೇರಿಕೊಂಡಿದ್ದ.
ಬಳಿಕ ಪೊಲೀಸರು ಆತನನ್ನು ಪತ್ತೆ ಹಚ್ಚಿದ್ದು, ಹುಡುಗಿಯ ಮನೆಯಲ್ಲಿ ಯುವಕನ್ನು ಬಂಧಿಸಿದರು. ತಮ್ಮಿಬ್ಬರ ನಡುವಿನ ಸಂಬಂಧಕ್ಕೆ ಹುಡುಗಿಯ ಪೋಷಕರು ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ ಕಾರಣ ಹೀಗೆ ಮಾಡಿದ್ದೇನೆ ಎಂದು ವಿಚಾರಣೆ ಸಂದರ್ಭ ಹೇಳಿದ್ದಾನೆ. ಹುಡುಗನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹುಡುಗಿಯನ್ನು ಐಸೋಲೇಶನ್ ದಾಖಲಿಸಿದ್ದಾರೆ.