ನವದೆಹಲಿ, ಮಾ.28 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ ಪ್ರಪಂಚದಾತ್ಯಂತ ಮರಣಮೃದಂಗ ಬಾರಿಸಿದ್ದು, ಅಟ್ಟಹಾಸ ಮೆರೆಯುತ್ತಿದೆ. ಅಲ್ಲದೇ ಕೊರೊನಾ ವೈರಸ್ ವಿರುದ್ದ ಲಾಕ್ಡೌನ್ ಹಾಕಲಾಗಿದೆ. ಈ ಸಂದರ್ಭ ಪ್ರಧಾನಿ ಮೋದಿ ಅವರು ದೇಶವಾಸಿಗಳಲ್ಲಿ ಹಣಕಾಸಿನ ನೆರವು ಕೋರಿದ್ದಾರೆ.
ಇದನ್ನು ಪ್ರಧಾನ ಮಂತ್ರಿ ನಾಗರಿಕರ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಯಲ್ಲಿ ರಚಿಸಲಾಗಿದೆ.
ಕೊರೊನಾ ನಿಯಂತ್ರಣ ಕ್ರಮಕ್ಕಾಗಿ ದೇಶದ ಜನರು ಹಣಕಾಸಿನ ನೆರವನ್ನು ನೀಡುವಂತೆ ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
PM-CARES FUND ಗೆ ಕೊಡುಗೆ ನೀಡಿ. ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಸಂಭವಿಸಿದ್ದಲ್ಲಿ ಇದು ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.