ತಮಿಳುನಾಡು, ಮಾ.29 (DaijiworldNews/PY) : ಏಕಾಏಕಿ ಹೋಂಕ್ವಾರಂಟೈನ್ನಲ್ಲಿದ್ದ ಯುವಕನೊಬ್ಬ ಪಕ್ಕದ ಮನೆಯಲ್ಲಿದ್ದ 80 ವರ್ಷದ ವೃದ್ದೆಗೆ ಕಚ್ಚಿದ ಪರಿಣಾಮವಾಗಿ ಆಕೆ ಸಾವನ್ನಪ್ಪಿದ ಘಟನೆ ತೆನಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇತ್ತೀಚೆಗಷ್ಟೆ ಈ ಯುವಕ ಶ್ರೀಲಂಕಾದಿಂದ ಮರಳಿದ್ದು, ತೆನಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಹೋಂಕ್ವಾರಂಟೈನ್ನಲ್ಲಿದ್ದ. ಆದರೆ, ಶುಕ್ರವಾರ ಮನೆಯಿಂದ ನಗ್ನವಾಗಿ ಹೊರಬಂದು ನೆರೆಮನೆಯಲ್ಲಿದ್ದ ವೃದ್ದೆಯ ಕುತ್ತಿಗೆ ಭಾಗಕ್ಕೆ ತೀವ್ರವಾಗಿ ಕಚ್ಚಿದ್ದು, ಇದರಿಂದ ಗಂಭೀರ ಗಾಯಕ್ಕೊಳಗಾದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ವೃದ್ದೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಟ್ಟೆ ವ್ಯಾಪಾರ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.
ಇತ್ತೀಚೆಗಷ್ಟೆ ಶ್ರೀಲಂಕಾದಿಂದ ಹಿಂದಿರುಗಿದ್ದ ಈತನನ್ನು ಕೊರೊನಾ ವೈರಸ್ ನಿಯಮದ ಪ್ರಕಾರ ಯುವಕನನ್ನು ಆರೋಗ್ಯ ಅಧಿಕಾರಿಗಳು ಹೋಂಕ್ವಾರಂಟೈನ್ಗೆ ಒಳಪಡಿಸಿದ್ದರು. ಆದರೆ, ಆತ ಶುಕ್ರವಾರ ಏಕಾಏಕಿ ಈತ ಮನೆಯಿಂದ ನಗ್ನವಾಗಿ ಹೊರಬಂದು ಬೀದಿಯಲ್ಲಿ ಓಡಾಡಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಕುಟುಂಬಸ್ಥರು ಆತನನ್ನು ಹಿಡಿಯಲು ಶತಪ್ರಯತ್ನ ಮಾಡಿದ್ದಾರೆ. ಈ ಸಂದರ್ಭ ಆತ ನೆರೆಮನೆಯ ವೃದ್ದೆಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಆದರೆ, ಆತ ರೋಷದಲ್ಲಿ ತಕ್ಷಣವೇ ವೃದ್ದೆಯ ಕತ್ತಿಗೆ ಕಚ್ಚಿದ್ದು, ಇದರಿಂದ ಗಂಭೀರ ಗಾಯಕ್ಕೊಳಗಾದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ.