ಗ್ವಾಲಿಯರ್, ಮಾ 29 (Daijiworld News/MSP): ಬಿಎಸ್ಎಫ್ನ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ 57 ವರ್ಷ ವಯಸ್ಸಿನ ಬಿಎಸ್ಎಫ್ನ ಅಧಿಕಾರಿ ಇವರಾಗಿದ್ದಾರೆ. ಎರಡನೇ ಕಮಾಂಡ್ ಶ್ರೇಣಿಯ ಅಧಿಕಾರಿಯಾಗಿರುವ ಇವರು ಪ್ರಸ್ತುತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೊಂದಿಗೆ ಸಂಪರ್ಕದಲ್ಲಿದ್ದ ಸುಮಾರು 50 ಜನ ಬಿಎಸ್ಎಫ್ ಯೋಧರನ್ನು ಹೋಮ್ ಕ್ವಾರೆಂಟೈನ್ನಲ್ಲಿ ಇಡಲಾಗಿದೆ.
ಗ್ವಾಲಿಯರ್ ನ ತೆಕನ್ಪುರ ನಗರದ ಬಿಎಸ್ಎಫ್ ಅಕಾಡೆಮಿಯ ಅಧಿಕಾರಿಯಾಗಿದ್ದಾರೆ. ಇವರ ಪತ್ನಿ ಇಂಗ್ಲೆಂಡ್ ಪ್ರವಾಸದ ಇತಿಹಾಸ ಹೊಂದಿದ್ದು ಹೀಗಾಗಿ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ.
ಸೋಂಕಿತ ಅಧಿಕಾರಿ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಮತ್ತು ಇನ್ಸ್ಪೆಕ್ಟರ್ ಜನರಲ್ (ಐಜಿ), ಬಿಎಸ್ಎಫ್ ಅಕಾಡೆಮಿಯ ನಿರ್ದೇಶಕರು ಸೇರಿದಂತೆ ಅನೇಕರು ನಡೆಸಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಇವರನ್ನೆಲ್ಲಾ ಕ್ವಾರೆಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ.