ನವದೆಹಲಿ, ಮಾ.29 (DaijiworldNews/PY) : ತಮಗೆ ತವರಿಗೆ ಮರಳಲು ವಿಮಾನ ವ್ಯವಸ್ಥೆ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಯುಕೆಯಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಭಾರತ ಸರ್ಕಾರ ಕೊರೊನಾ ಸೋಂಕು ವ್ಯಾಪಿಸಿದುವುದನ್ನು ನಿಯಂತ್ರಿಸಲು ಹೊರದೇಶಗಳ ವಿಮಾನ ಪ್ರಯಾಣಕ್ಕೆ ನಿರ್ಬಂಧಿಸಿದೆ. ಈ ಹಿನ್ನೆಲೆ ತವರಿಗೆ ಮರಳಲು ಯುಕೆಯಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಮರಳಲು ಸಾಧ್ಯವಾಗುತ್ತಿಲ್ಲ.
ಕನಿಷ್ಠ 380 ಭಾರತದ ವಿದ್ಯಾರ್ಥಿಗಳ ಗುಂಪೊಂದು ತಮ್ಮ ಪಾಸ್ಪೋರ್ಟ್ ವಿವರಗಳ ಮಾಹಿತಿ ಸಂಗ್ರಹಿಸಿದೆ. ಆ ಮುಖಾಂತರ ಭಾರತ ಸರ್ಕಾರದ ಮೇಲೆ ಸಾಮೂಹಿಕ ಒತ್ತಡ ಹೇರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.
ಕೊರೊನಾ ವೈರಸ್ ಯುಕೆ ಪಕ್ಕದ ಇಟಲಿ ಹಾಗೂ ಫ್ರಾನ್ಸ್ ದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿದ್ದು, ಈಗಾಗಲೇ ಸಾವಿರಾರು ಜನರು ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ಪ್ರಕರಣಗಳು ಯುಕೆಯಲ್ಲಿಯೂ ಅಧಿಕವಾಗುತ್ತಿದ್ದು, ವಿದ್ಯಾರ್ಥಿಗಳನ್ನು ಆತಂಕಕ್ಕೀಡು ಮಾಡಿದೆ.