ಲಕ್ನೋ, ಮಾ.29 (DaijiworldNews/PY) : ಬಾಲಿವುಡ್ ನಟಿ ಕನಿಕಾ ಕಪೂರ್ ಕೊರೊನಾ ವೈರಸ್ನಿಂದ ಬಳಲುತ್ತಿದ್ದು, ನಾಲ್ಕನೇ ಬಾರಿ ಅವರನ್ನು ಪರೀಕ್ಷೆಗೆ ಒಳಪಡಿಲಾಗಿದ್ದು, ಇದರಲ್ಲೂ ವೈರಸ್ ಇರುವುದು ಖಚಿತವಾಗಿದೆ ಎಂದು ವರದಿ ತಿಳಿಸಿದೆ.
ಕನಿಕಾ ಅವರು ಮಾ.20 ರಂದು ಆಸ್ಪತ್ರಗೆ ದಾಖಲಾಗಿದ್ದರು. ಈ ಸಂದರ್ಭ ಕನಿಕಾ ಅವರಲ್ಲಿ ವೈರಸ್ ದೃಢಪಟ್ಟಿತ್ತು. ಸತತ ಚಿಕಿತ್ಸೆಯ ನಂತರವೂ ಕನಿಕಾ ಅವರಲ್ಲಿ ವೈರಸ್ ಇನ್ನೂ ದೃಢವಾಗಿರುವುದು ಅವರ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಕನಿಕಾ ಅವರು ಲಂಡನ್ಗೆ ತೆರಳಿದ್ದು ಮಾ.9 ರಂದು ಭಾರತಕ್ಕೆ ವಾಪಾಸ್ಸಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು. ಅವರನ್ನು ನಂತರ ಗಾಂಧಿ ಪೋಸ್ಟ್ ಗ್ರಾಡ್ಜುಯೇಟ್ ಇಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಗೆ ದಾಖಲಾದ ನಂತರ ಕನಿಕಾ ಅವರ ವರ್ತನೆ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿದ್ದವು.
ಕನಿಕಾ ಅವರ ವೈದ್ಯಕೀಯ ವರದಿಗಳನ್ನು ನೋಡದರೆ ಭಯವಾಗುತ್ತಿದೆ. ಕನಿಕಾ ಅವರು ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ. ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದ್ದು, ಏರ್ ಲಿಫ್ಟ್ ಮುಖಾಂತರ ಆಕೆಯನ್ನು ಸ್ಥಳಾಂತರ ಮಾಲು ಕೂಡಾ ಸಾಧ್ಯವಾಗುತ್ತಿಲ್ಲ. ಆಕೇ ಶೀಘ್ರವೇ ಗುಣಮುಖರಾಗಲಿ ಎನ್ನುವುದು ನಮ್ಮ ಪ್ರಾರ್ಥನೆ ಎಂದು ಕನಿಕಾ ಅವರ ಕುಟುಂಬದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಕನಿಕಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಎಸ್ಜಿಪಿಜಿಐಎಂಎಸ್ ವೈದ್ಯರು ತಿಳಿಸಿದ್ದಾರೆ.