ಕಲಬುರ್ಗಿ, ಮಾ.29 (DaijiworldNews/PY) : ಕೊರೊನಾ ಸೋಂಕು ವ್ಯಾಪಕವಾಗಿ ಪಸರಿಸುತ್ತಿರುವ ಕಾರಣ ಸದ್ಯಕ್ಕೆ ತಮ್ಮ ಊರಿಗೆ ಹೊರರಾಜ್ಯಗಳಲ್ಲಿ ಹಾಗೂ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಿಲುಕಿಕೊಂಡವರು ಮರಳುವುದು ಬೇಡ. ಅಧಿಕಾರಿಗಳು ಅದಕ್ಕೆ ಅವಕಾಶವನ್ನೂ ಕೊಡಬಾರದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕೊರೊನಾ ಕೊರೊನಾ ಸೋಂಕು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು
ಮಾತನಾಡಿದ ಅವರು, ಅಧಿಕಾರಿಗಳು ಅವರಿರುವಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡಲಿದ್ದಾರೆ. ಗ್ರಾಮಸ್ಥರಲ್ಲಿ ತಮ್ಮ ಊರಿಗೆ ಮರಳುವುದರಿಂದ ಸೋಂಕು ಹರಡುವ ಭೀತಿ ಉಂಟಾಗಬಹುದು. ಹಾಗಾಗಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಗಡಿಯಲ್ಲಿರುವ ಜನರನ್ನು ಬಿಡಬಾರದು ಎಂದು ತಿಳಿಸಿದರು.
ತಮ್ಮ ಉತ್ಪನ್ನಗಳನ್ನು ರೈತರು ಮಾರಾಟ ಮಾಡಲು ಯಾವುದೇ ತೊಂದರೆಯಿಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ಅವರು ಅನುಮತಿ ಪಡೆದು ಎಪಿಎಂಸಿಗೆ ತಂದು ಮಾರಾಟ ಮಾಡಬಹುದು. ಅಗತ್ಯ ದಾಸ್ತಾನನ್ನು ಔಷಧಿ ಸಗಟು ಪೂರೈಕೆದಾರರು ಪಡೆಯಬಹುದು. ಔಷಧಿ ಅತ್ಯಗತ್ಯ ವಸ್ತುಗಳ ಪಟ್ಟಿಯಲ್ಲಿ ಬರುವುದರಿಂದ ಯಾರೂ ಇದಕ್ಕೆ ಅಡ್ಡಿ ಮಾಡಬಾರದು. ಸುಳ್ಳು ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಿ ಜೈಲಿಗಟ್ಟಿ. ಇತರರಿಗೆ ಇದು ಪಾಠವಾಗಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 40 ವೆಂಟಿಲೇಟರ್ಗಳಿದ್ದು, ಸರ್ಕಾರಕ್ಕೆ ಹೆಚ್ಚುವರಿ 100 ವೆಂಟಿಲೇಟರ್ಗಳನ್ನು ಪೂರೈಸಲು ಮನವಿ ಸಲ್ಲಿಸುವಂತೆ ಡಿಸಿಎಂ ಅವರು ಜಿಲ್ಲಾಧಿಕಾರಿ ಶರತ್.ಬಿ ಅವರಿಗೆ ಸೂಚಿಸಿದರು.