ನವದೆಹಲಿ, ಮಾ.30 (Daijiworld News/MB) : ವಲಸೆ ಕಾರ್ಮಿಕರನ್ನು ತಮ್ಮ ಹಳ್ಳಿಗಳಿಗೆ ಹಿಂದಿರುಗುವ ಬದಲು ನೀವು ನೆಲೆಸಿರುವ ಸ್ಥಳದಲ್ಲೇ ಇರಬೇಕೆಂದು ಮನವಿ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿಮ್ಮ ರೂಂ ಬಾಡಿಗೆ ಪಾವತಿ ಮಾಡಲು ಸಾಧ್ಯವಾಗದಿದ್ದಲ್ಲಿ ತಮ್ಮ ಮನೆ ಬಾಡಿಗೆಯನ್ನು ಸರಕಾರ ಪಾವತಿಸಲಿದೆ ಎಂದು ಹೇಳಿದರು.
ಜನರು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮನ್ನು ಮತ್ತು ತಮ್ಮ ಪ್ರೀತಿಪಾತ್ರರ ಬಗ್ಗೆ ಯೋಚಿಸಬೇಕು, ಈ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕು ಎಂದರು.
ಹಾಗೆಯೇ ವಲಸೆ ಕಾರ್ಮಿಕರು ತಾವು ನೆಲೆಸಿರುವ ಜಾಗದಿಂದ ವಲಸೆ ಹೋಗಲು ಕಾರಣ ಲಾಕ್ಡೌನ್ನಿಂದಾಗಿ ಉದ್ಯೋಗವಿಲ್ಲದೆ ಕೈಯಲ್ಲಿ ಹಣವಿಲ್ಲದಿರುವುದರಿಂದ ಮನೆ ಮಾಲೀಕರು ಹೊರಹಾಕುವ ಭಯವೂ ಆಗಿದೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ಕಾರ್ಮಿಕರಿಂದ, ವಿದ್ಯಾರ್ಥಿಗಳಿಂದ ಮನೆ ಖಾಲಿ ಮಾಡುವಂತೆ ಹೇಳಬಾರದು. ಖಾಲಿ ಮಾಡಲು ಹೇಳಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.