ನವದೆಹಲಿ, ಮಾ.30 (DaijiworldNews/PY) : ಕೊರೊನಾ ವೈರಸ್ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್ಡೌನ್ ಆಗಿದೆ. ಪೆಟ್ರೋಲ್, ಡಿಸೇಲ್ ಪೂರೈಕೆ ಕಥೆ ಏನು. ಉಜ್ವಲ್ ಫಲಾನುಭವಿಗಳಿಗೆ 3 ತಿಂಗಳಿಗೆ ಆಗುವಷ್ಟು ಉಚಿತವಗಾಗಿ ಎಲ್ಪಿಜಿ ವ್ಯವಸ್ಥೆ ಪ್ರಧಾನಿ ಮೋದಿ ಅವರು ನೀಡಿದ್ದಾರೆ. ಗ್ಯಾಸ್ ಸಿಲಿಂಡರ್ ದೇಶಕ್ಕೆ ಸಾಕಾಗುತ್ತಾ. ಈ ಬಗ್ಗೆ ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ ಎನ್ನುವ ಭರವಸೆಯನ್ನು ಇಂಡಿಯನ್ ಆಯಿಲ್ ಕಾರ್ಪೋರೇಶನ್ ನೀಡಿದೆ.
ಲಾಕ್ಡೌನ್ ಇದ್ದರೂ. ತೈಲದ ಕೊರತೆ ದೇಶದಲ್ಲಿ ಆಗುವುದಿಲ್ಲ. ಭಾರತ ಈಗಾಗಲೇ ಎಪ್ರಿಲ್ ತಿಂಗಳವರೆಗೆ ಆಗುವಷ್ಟು ಪೆಟ್ರೋಲ್, ಡಿಸೇಲ್, ಎಲ್ಪಿಜಿಯನ್ನು ಸಂಗ್ರಹಿಸಿದೆ ಎಂದು ಐಒಸಿ ಚೇರ್ಮನ್ ಸಂಜೀವ್ ಸಿಂಗ್ ತಿಳಿಸಿದ್ದಾರೆ.
ಇಂಧನ ತೈಲ ರವಾನಿಸಲು ದೇಶದ ಮೂಲೆ ಮೂಲೆಗಳಿಗೆ ಸಮರೋಪಾದಿ ಕಾರ್ಯ ಸಾಗಿದೆ. ಎಪ್ರಿಲ್ ಬೇಡಿಕೆಗೆ ಆಗುವಷ್ಟು ಇಂಧನ ತೈಲ ಈಗಾಗಲೇ ರವಾನೆಯಾಗಿದೆ. ಅಲ್ಲದೇ, ಗ್ಯಾಸ್ ಬುಕ್ಕಿಂಗ್ ವಿಚಾರವಾಗಿಯೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ತುರ್ತು ಸೇವೆಗೆ ಬೃಹತ್ ಸಂಗ್ರಹಕಾರ, ಎಲ್ಪಿಜಿ ಹಂಚಿಕೆದಾರರು, ಪೆಟ್ರೋಲ್ ಬಂಕ್ಗಳಿಗೆ ಇಂಧನ ಪೂರೈಸಿಯೂ ಸಾಕಷ್ಟು ಸಂಗ್ರಹವನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ದ್ವಿಚಕ್ರ ವಾಹನಗಳು, ಕಾರುಗಳ ಓಡಾಟ ನಿಂತಿರುವುದರಿಂದ ಪೆಟ್ರೋಲ್ ಬೇಡಿಕೆ ಶೇ.8ರಷ್ಟು ಕಡಿಮೆಯಾಗಿದೆ. ಮಾರ್ಚ್ ತಿಂಗಳ ಡಿಸೇಲ್ ಬೇಡಿಕೆಯಲ್ಲಿ ಶೇ.16 ತಗ್ಗಿದೆ. ವೈಮಾನಿಕ ಇಂಧನ ಬೇಡಿಕೆ ವಿಮಾನ ಹಾರಾಟ ನಿಷಿದ್ದವಾದ ಕಾರಣ ಶೇ.20ರಷ್ಟು ಇಳಿಕೆಯಾಗಿದೆ ಎಂದಿ ತಿಳಿಸಿದ್ದಾರೆ.