ಉತ್ತರ ಪ್ರದೇಶ, ಮಾ.30 (Daijiworld News/MB) : ವಿಶ್ವದಾದ್ಯಂತ ಮರಣ ಮೃದಂಗ ಬಾರಿಸಿರುವ ಕೊರೊನಾ ಸೋಂಕಿನಿಂದಾಗಿ ಈ ಪುಟ್ಟ ಗ್ರಾಮದ ಜನರಿಗೆ ಸಮಸ್ಯೆಯಾಗಿದೆ. ಆದರೆ ಇವರಿಗೆ ಆಗಿರುವ ಸಮಸ್ಯೆಯೇ ಬೇರೆ ರೀತಿಯದ್ದು. ಆ ಸಮಸ್ಯೆಗೆ ಕಾರಣವೇ ಈ ಹಳ್ಳಿಯ ಹೆಸರು.
ಈ ಪುಟ್ಟ ಹಳ್ಳಿಯ ಹೆಸರು "ಕೊರೌನಾ" ಆಗಿದ್ದು ಈ ಹೆಸರಿನ ಕಾರಣದಿಂದಲ್ಲೇ ಇಲ್ಲಿನ ಜನರು ತಾರತಮ್ಯಕ್ಕೆ ಒಳಗಾಗುತ್ತಾರೆ ಎನ್ನುತ್ತಾರೆ ಆ ಗ್ರಾಮದ ಜನರು.
ಈ ಕುರಿತು ಮಾತನಾಡಿದ ಆ ಗ್ರಾಮಸ್ಥ ರಾಜನ್, ಈ ಗ್ರಾಮದ ಕೊರೌನಾ ಎಂಬ ಹೆಸರಿನ ಕಾರಣದಿಂದಾಗಿ ಜನರು ಹೊರಗೆ ಬರಲು ಇಷ್ಟಪಡುತ್ತಿಲ್ಲ. ಗ್ರಾಮದ ಜನರೆಲ್ಲರೂ ಆತಂಕದಲ್ಲಿ ಇದ್ದಾರೆ. ನಾವು ಯಾರಲ್ಲಾದರೂ "ಕೊರೌನಾ" ಹಳ್ಳಿಯಿಂದ ಬಂದವರು ಎಂದು ಹೇಳಿದರೆ ನಮ್ಮನ್ನು ಕೂಡಲೇ ದೂರ ಮಾಡುತ್ತಾರೆ. ನಮ್ಮ ಗ್ರಾಮದ ಹೆಸರು "ಕೊರೌನಾ", ಕೊರೊನಾ ಪೀಡಿತ ಗ್ರಾಮದಿಂದ ಬಂದವರಲ್ಲ ಎಂದು ಹೇಳಿದರು ಅವರು ನಂಬಲ್ಲ ಎಂದು ನೊಂದು ನುಡಿದಿದ್ದಾರೆ.
ಇನ್ನು ಜನರು ಕೊರೊನಾದಿಂದಾಗಿ ಬಹಳಷ್ಟು ಭಯಗೊಂಡಿದ್ದು ನಮ್ಮಲ್ಲಿ ದೂರವಾಣಿ ಮೂಲಕವೂ ಮಾತನಾಡಲ್ಲ. ನಾವು ರಸ್ತೆಯಲ್ಲಿ ಹೋದರೆ ನೀವು ಎಲ್ಲಿಗೆ ಹೋಗುವುದು ಎಂದು ಪೊಲೀಸರು ಕೇಳ್ತಾರೆ. ಕೊರೌನಾ ಗ್ರಾಮಕ್ಕೆ ಎಂದು ಹೇಳಿದರೆ ನಮ್ಮನ್ನು ವಿಚಿತ್ರವಾಗಿ ನೋಡ್ತಾರೆ. ಈ ಗ್ರಾಮದ ಹೆಸರು ಹೀಗಿರುವು ನಮ್ಮ ತಪ್ಪೆ ಎಂದು ಗ್ರಾಮಸ್ಥರೊಬ್ಬರ ಪ್ರಶ್ನೆ.
ಇನ್ನು ನಾವು ಯಾರಿಗಾದರೂ ದೂರವಾಣಿ ಕರೆ ಮಾಡಿ ನಾವು ಕೊರೌನಾದಿಂದ ಮಾತಾಡುವುದು ಎಂದು ಹೇಳಿದರೆ ತಮಾಷೆ ಮಾಡಿ ಕರೆಯನ್ನೇ ಕಟ್ ಮಾಡ್ತಾರೆ ಎಂದು ಹೇಳಿದ್ದಾರೆ.