ನವದೆಹಲಿ, ಮಾ.30 (DaijiworldNews/PY) : ಕೊರೊನಾ ಸೋಂಕು ಪ್ರಪಂಚದಾದ್ಯಂತ ಭೀತಿ ಉಂಟುಮಾಡಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸೃಷ್ಠಿ ಮಾಡಿರುವ ತಲ್ಲಣಕ್ಕೆ ಕೊನೆಯಿಲ್ಲದಂತಾಗಿದೆ. ಏಷ್ಯಾ ತೈಲ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕಿನ ಪರಿಣಾಮದಿಂದಾಗಿ ಅಪಾರ ನಷ್ಟ ಸಂಭವಿಸಿದ್ದು, 17 ವರ್ಷಗಳಲ್ಲೇ ತೈಲ ದರ ಕನಿಷ್ಠ ಮೊತ್ತಕ್ಕೆ ಇಳಿದಿದೆ.
ತೈಲ ದರ ನಿರ್ಧರಿಸುವ ಅಂತರಾಷ್ಟ್ರೀಯ ಬ್ರೆಂಟ್ ತೈಲ ಮಾರುಕಟ್ಟೆಯಲ್ಲಿ ಶೇ. 6.5ಕ್ಕೆ ಇಳಿದಿದ್ದು, ಒಂದು ಬ್ಯಾರೆಲ್ ಬೆಲೆ ₹ 1730ಕ್ಕೆ ಇಳಿದಿದೆ. ಇದೇ ವೇಳೆ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೆಟ್ ಮಾರುಕಟ್ಟೆಯಲ್ಲಿ ಶೇ.5.3 ರಷ್ಟು ಕುಸಿತ ಕಂಡು, ಬ್ಯಾರಲ್ಗೆ ₹ 1500 ತಲುಪಿದೆ.
ದೇಶದ ಪರಿಸ್ಥಿತಿ ಎಪ್ರಿಲ್ ಮಧ್ಯದಲ್ಲಿ ಸುಧಾರಿಸಲಿದೆ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮಾತು ಬದಲಾಯಿಸಿದ್ದಾರೆ. ಚೇತರಿಕೆಯ ಹಾದಿಗೆ ಜೂ.1ರ ಒಳಗೆ ಮರಳಲಿದ್ದೇವೆ ಎಂದಿದ್ದಾರೆ. ಎ.30ರ ವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಮೆರಿಕದಲ್ಲಿ ನಿರ್ದೇಶನ ನೀಡಲಾಗಿದೆ.
ಇದುವರೆಗೆ ಅಮೆರಿಕದಲ್ಲಿ ಸುಮಾರು 1.4 ಲಕ್ಷ ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಸುಮಾರು 2,400 ಜನರು ಸಾವನ್ನಪ್ಪಿದ್ದಾರೆ.
ಹಲವು ದೇಶಗಳು ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವ ಸಲುವಾಗಿ ಲಾಕ್ಡೌನ್ ಘೋಷಿಸಿವೆ. ವಾಹನ ಸಂಚಾರ ನಿರ್ಬಂಧಿಸಿವೆ. ತೈಲ ಬೆಲೆ ಬೇಡಿಕೆ ಕುಸಿಯಲು ಕಾರಣವಾಗಿದೆ.
ಪ್ರಮುಖ ತೈಲ ಉತ್ಪಾದಕ ದೇಶಗಳಾದ ಸೌದಿ ಅರೇಬಿಯಾ ಮತ್ತು ರಷ್ಯಾದಲ್ಲಿ ಉತ್ಪಾದನೆ ನಿಲ್ಲಿಸುವ ಸಂಬಂಧ ಸ್ಪಷ್ಟ ತೀರ್ಮಾನಗಳನ್ನು ತೆಗೆದುಕೊಳ್ಳದಿರುವುದು ಪ್ರಮುಖ ತೈಲ ಉತ್ಪಾದಕ ದೇಶಗಳಾದ ಸೌದಿ ಅರೇಬಿಯಾ ಮತ್ತು ರಷ್ಯಾದಲ್ಲಿ ಉತ್ಪಾದನೆ ನಿಲ್ಲಿಸುವ ಸಂಬಂಧ ಸ್ಪಷ್ಟ
ರಷ್ಯಾದೊಂದಿಗೆ ಉತ್ಪಾದನೆ ಕಡಿತಗೊಳಿಸುವ ಸಂಬಂಧ ಮಾತುಕತೆ ನಡೆಸಿಲ್ಲ ಎಂದು ಸೌದಿ ಕಳೆದವಾರ ಪ್ರಕಟಿಸಿತ್ತು. ರಷ್ಯಾ ಇಂಧನ ಸಚಿವರು ಇದೇ ವೇಳೆ ಒಂದು ಬ್ಯಾರಲ್ಗೆ $ 25 ಡಾಲರ್ಗೆ (ಅಂದಾಜು ₹ 1880) ಕುಸಿದಿರುವುದು ತೈಲ ಉತ್ದಾಕದರಿಗೆ ದೊಡ್ಡ ಸಂಕಷ್ಟವೇನಲ್ಲ ಎಂದು ಹೇಳಿದ್ದರು.
ಎರಡೂ ದೇಶಗಳು ಉತ್ಪಾದನೆ ಕಡಿತಗೊಳಿಸುವ ವಿಚಾರದಲ್ಲಿ ಕಾದುನೋಡುವ ತಂತ್ರ ಮುಂದುವರಿಸಿವೆ.