ಬೆಂಗಳೂರು, ಮಾ.31(DaijiworldNews/PY) : ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳಿಗೆ ಬೇಸಿಗೆ ರೆಜೆ ಘೋಷಿಸಿದೆ.
ದೇಶದಲ್ಲಿ ಕೊರೊನಾ ವೈರಸ್ ಜಾಸ್ತಿಯಾದ ಕಾರಣ ಎ.11ರ ವರೆಗೆ ಈ ಮೊದಲೇ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಈಗ ಕೊರೊನಾ ಸೋಂಕು ವ್ಯಾಪಿಸುತ್ತಿರುವುದು ಹೆಚ್ಚಾದ ಕಾರಣ ಎ.12ರಿಂದ ರಾಜ್ಯದ ಎಲ್ಲಾ ಶಾಲೆಗಳಿಗೆ ಬೇಸಿಗೆ ರಜೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ
ಇದರೊಂದಿಗೆ ಸುತ್ತೋಲೆಯಲ್ಲಿ ಶಿಕ್ಷಕರಿಗೆ ಕೆಲವು ನಿಯಮಗಳನ್ನು ಸೂಚಿಸಿರುವ ಸರ್ಕಾರ, ಶಿಕ್ಷಕರು ಕೇಂದ್ರ ಸ್ಥಾನ ಬಿಡುವಂತಿಲ್ಲ ಮತ್ತು ಅವರ ಮೊಬೈಲ್ ನಂಬರ್ಗಳನ್ನು ಬಿಇಓಗಳಿಗೆ ನೀಡಬೇಕು. ಅಗತ್ಯ ತುರ್ತು ಸೇವೆ ಇದ್ದರೆ ಕರೆ ಮಾಡಿದಾಗ ಬಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸರ್ಕಾರ ಆದೇಶ ನೀಡಿದೆ.