ನವದೆಹಲಿ, ಮಾ.31(DaijiworldNews/PY) : ಮಹಾಮಾರಿ ಕೊರೊನಾ ವೈರಸ್ನಿಂದ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಆರ್ಥಿಕ ನೆರವು ನೀಡುವ ಹಿನ್ನೆಲೆ ಸಿಎಂ ಸೇರಿದಂತೆ ಶಾಸಕರು, ಸಚಿವರ ಶೇ.75ರಷ್ಟು ಸಂಬಳವನ್ನು ಕಡಿತಗೊಳಿಸುವುದಾಗಿ ಮಂಗಳವಾರ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ.
ಸ್ಥಳೀಯ ಸಂಸ್ಥೆಗೆ ಹಾಗೂ ವಿಧಾನಸಭೆಗೆ ಆಯ್ಕೆಯಾದ ಜನಪ್ರತಿನಿಧಿಗಳ ಸಂಬಳವನ್ನು ಶೇ.75ರಷ್ಟು ಕಡಿತಗೊಳಿಸಲಾಗುವುದು. ಈ ಪಟ್ಟಿಯಲ್ಲಿ ರಾಜ್ಯ ಸ್ವಾಮಿತ್ವದ ಕಾರ್ಪೋರೇಷನ್ಸ್, ರಸ್ತೆ ಸಾರಿಗೆ ಸಂಸ್ಥೆ, ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಪೋರೇಶನ್ ಕೂಡಾ ಸೇರ್ಪಡೆಗೊಂಡಿದೆ ಎಂದು ತಿಳಿಸಿದ್ದಾರೆ.