ಬೆಂಗಳೂರು, ಮಾ.31(DaijiworldNews/PY) : ಕೊರೊನಾ ಸೋಂಕು ಇರುವವರನ್ನು ಕೇರಳ ರಾಜ್ಯದವರು ಕರ್ನಾಟಕಕ್ಕೆ ಕಳುಹಿಸುತ್ತಿದ್ದಾರೆ. ರಾಜ್ಯಕ್ಕೆ ದಕ್ಷಿಣ ಕನ್ನಡ, ಕೊಡಗು, ಮೈಸೂರು ಗಡಿ ಮೂಲಕ ಕಳುಹಿಸಿಕೊಡುತ್ತಿದ್ದಾರೆ. ರಾಜ್ಯದ ಗಡಿಯೊಳಗೆ ಬಾರದಂತೆ ತಡೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದೂರವಾಣಿ ಮೂಲಕ ಮೈಸೂರು ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ರೈತರಿಗೆ ಬೆಳೆ ನಷ್ಟವಾಗಬಾರದು. ರೈತರ ಬೆಳಗಳನ್ನು ಎಪಿಎಂಸಿ ಮೂಲಕ ಖರೀದಿಸಲು ಆರಂಭಿಸಿ ಎಂದು ತಿಳಿಸಿದರು.
ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಕೊರೊನಾ ವಿರುದ್ದ ಹೋರಾಡಲು ಸಭೆ ಸೇರಿ ಚರ್ಚೆ ನಡೆಸಿದರು.