ನವದೆಹಲಿ,ಮಾ 31 (Daijiworld News/MSP): ಮಂಗಳವಾರ ಕೊರೊನಾ ಸುದ್ದಿ ಪ್ರಾರಂಭವಾಗಿದ್ದೇ ಕೇರಳ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾವಿನೊಂದಿಗೆ. ಭಾರತದಲ್ಲಿ ಕೊರೊನಾ ಸೋಂಕಿತರ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದುವರೆಗೆ 1380 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ದೃಢಪಟ್ಟಿದೆ.
ಈ ನಡುವೆ ದೇಶದಲ್ಲಿ 16 ಕರೋನವೈರಸ್ ಹಾಟ್ಸ್ಪಾಟ್ಗಳನ್ನು ಸರ್ಕಾರ ಗುರುತಿಸಿದೆ. ಈ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ.
- ದಿಲ್ಶಾದ್ ಗಾರ್ಡನ್, ದೆಹಲಿ
- ನಿಜಾಮುದ್ದೀನ್, ದೆಹಲಿ
- ಪಥನಮತ್ತಟ್ಟ, ಕೇರಳ
- ಕಾಸರಗೋಡು, ಕೇರಳ
- ನೋಯ್ಡಾ, ಉತ್ತರ ಪ್ರದೇಶ
- ಮೀರತ್, ಉತ್ತರ ಪ್ರದೇಶ
- ಭಿಲ್ವಾರಾ, ರಾಜಸ್ಥಾನ
- ಜೈಪುರ, ರಾಜಸ್ಥಾನ
- ಮುಂಬೈ, ಮಹಾರಾಷ್ಟ್ರ
- ಪುಣೆ, ಮಹಾರಾಷ್ಟ್ರ
- ಅಹಮದಾಬಾದ್, ಗುಜರಾತ್
- ಇಂದೋರ್, ಮಧ್ಯಪ್ರದೇಶ
- ನವಾನ್ಶಹರ್, ಪಂಜಾಬ್
- ಬೆಂಗಳೂರು, ಕರ್ನಾಟಕ
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
- ಈರೋಡ್, ತಮಿಳುನಾಡು
ರಾಷ್ಟ್ರ ರಾಜಧಾನಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಧಾರ್ಮಿಕ ಸಭೆಗೆ ಹಾಜರಾಗಿದ್ದ ತೆಲಂಗಾಣದ ಆರು ಮಂದಿ ಸೇರಿದಂತೆ ಕನಿಷ್ಠ ಇಲ್ಲಿಯವರೆಗೆ 11 ಹೊಸ ಸಾವುಗಳು ವರದಿಯಾಗಿವೆ.
ಮಾರಣಾಂತಿಕ ವೈರಸ್ ಭಾರತದಲ್ಲಿ ಸ್ಥಳೀಯ ಪ್ರಸರಣ ಹಂತದಲ್ಲಿದೆ ಹಾಗೂ ಇನ್ನೂ ಸಮುದಾಯ ಪ್ರಸರಣ ಹಂತಕ್ಕೆ ಹೋಗಿಲ್ಲವೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೊಂಡಿದೆ. ಭಾರತದಲ್ಲಿ ಮಾರ್ಚ್ 21ರ ಬಳಿಕ ವಿದೇಶಿಗರಿಗೆ ಪ್ರವೇಶ ನಿಷೇಧ, ಶಾಲೆ, ಕಾಲೇಜುಗಳನ್ನು ಮುಚ್ಚುವುದೂ ಸೇರಿದಂತೆ ಕಠಿಣ ಕ್ರಮಕೈಗೊಂಡ ಮೇಲೆ ಕೊರೋನಾ ಸೋಂಕಿತರ ಪ್ರಮಾಣ ಬೇರೆ ದೇಶಗಳಲ್ಲಿ ಆದಂತೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಇನ್ನೆರೆಡು ವಾರ ಜನರು ಕಡ್ಡಾಯವಾಗಿ ಮನೆಯೊಳಗೇ ಇದ್ದು, ವೈರಸ್ ಹರಡುವುದನ್ನು ತಡೆದರೆ ದೇಶ ಈ ಸಮಸ್ಯೆಯನ್ನು ದಿಟ್ಟವಾಗಿ ಎದುರಿಸಿ ಗೆಲ್ಲಬಹುದಾಗಿದೆ.
ಈ ನಡುವೆ ಸುಪ್ರೀಂ ಕೋರ್ಟ್ "ಭಯ ಮತ್ತು ಭೀತಿ" ಕೊರೊನಾ ವೈರಸ್ ಗಿಂತ ದೊಡ್ಡ ಸಮಸ್ಯೆಯಾಗುತ್ತಿದೆ ಎಂದು ಎಚ್ಚರಿಸಿದೆ.