ಬೆಂಗಳೂರು, ಮಾ.31(DaijiworldNews/PY) : "ಲಾಕ್ಡೌನ್ ಇದ್ದರೂ ರೈತರ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಪರಿಣಾಮ ಭೀಕರವಾಗಿರುತ್ತದೆ. ರೈತರ ರಕ್ಷಣೆಗೆ ಸರ್ಕಾರ ತಕ್ಷಣವೇ ಧಾವಿಸಬೇಕು" ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, "ರೈತರ ಸಮಸ್ಯೆ ಬಗೆಹರಿಸದೇ ಹೋದರೆ ಅದರ ಪರಿಣಾಮಗಳು ಭೀಕರವಾಗಿರುತ್ತವೆ ಎಂದು ನಾನು ನಿನ್ನೆಯೇ ಹೇಳಿದ್ದೆ.ಕಲ್ಲಂಗಡಿ ಮಾರಾಟ ಮಾಡಲಾಗದೇ ಕಲಬುರ್ಗಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಆ ಭೀಕರತೆಗೆ ಸಾಕ್ಷಿ.ಸರ್ಕಾರ ರೈತರ ರಕ್ಷಣೆಗೆ ತಕ್ಷಣವೇ ಧಾವಿಸಬೇಕು.ಯುದ್ಧದ ನಡುವೆ ನಮ್ಮವರನ್ನು ನಾವು ರಕ್ಷಿಸಿಕೊಳ್ಳುವುದೇ ನಾಯಕತ್ವ" ಎಂದು ತಿಳಿಸಿದ್ದಾರೆ.
"ಸರ್ಕಾರವೇ ರೈತರ ಉತ್ಪನ್ನಗಳನ್ನು ಖರೀದಿಸುವ ಕಾರ್ಯ ಮಾಡಬೇಕು. ಬಳಿಕ ಬೇಕಾದವರಿಗೆ ಇದನ್ನು ತಲುಪಿಸುವ ಕೆಲಸವನ್ನೂ ಮಾಡಬೇಕು" ಎಂದು ಟ್ವೀಟ್ನಲ್ಲಿ ಸೋಮವಾರ ತಿಳಿಸಿದ್ದರು.
ಬೀದರ್ನಲ್ಲಿ ಮಂಗಳವಾರ ಕಲ್ಲಂಗಡಿ ಮಾರಲಾಗದೇ ಕಲ್ಲಂಗಡಿ ಬೆಳೆಯುವ ರೈತನೋರ್ವ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.