ನವದೆಹಲಿ, ಎ.01 (DaijiworldNews/PY) : ಕೊರೊನಾ ವೈರಸ್ಗೆ ಸಂಬಂಧಿಸಿದ ಸರ್ಕಾರ ದೃಢೀಕರಿಸದ ಯಾವುದೇ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸುವುದಕ್ಕೆ, ಪ್ರಸಾರ ಮಾಡುವುದಕ್ಕೆ ಹಾಗೂ ಮುದ್ರಿಸುವುದಕ್ಕೆ ನಿರ್ಬಂಧ ಹೇರಬೇಕು ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿದೆ.
ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ವಿಧಿಸಿದ ಬಳಿಕ ವಲಸೆ ಕಾರ್ಮಿಕರಿಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಅರ್ಜಿಗಳಿಗೆ ಸಂಬಂಧಿಸಿ ಸೀಡಲಾಗಿದ್ದ ಸ್ಥಿತಿಗತಿ ವರದಿಯಲ್ಲಿ ಕೇಂದ್ರ ಸರ್ಕಾರ ಈ ಮನವಿ ಮಾಡಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ಕೊರೊನಾ ವೈರಸ್ ಕುರಿತ ಬೆಳವಣಿಗೆಗಳ ವಿಚಾರವಾಗಿ ಅಧಿಕೃತ ಮಾಹಿತಿಗಳನ್ನು ಪ್ರಕಟಿಸಲು ಹಾಗೂ ಉಲ್ಲೇಖಿಸಲು ಮಾಧ್ಯಮಗಳಿಗೆ ನಿರ್ದೇಶನ ನೀಡಿತು.