ಬೆಂಗಳೂರು, ಎ.01 (DaijiworldNews/PY) : ಬೆಂಗಳೂರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಅಧಿಕಾರಿಗಳು ಮಂಗಳವಾರ ಎರಡು ಕಡೆ ದಾಳಿ ನಡೆಸಿದ್ದು, ನಕಲಿ ಥರ್ಮೋ ಮೀಟರ್ಗಳು ಹಾಗೂ ನಕಲಿ ಸ್ಯಾನಿಟೈಸರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ತಯಾರಕರ ಯಾವುದೇ ಹೆಸರು ಅಥವಾ ಮೂಲದ ಗುರುತು ಇಲ್ಲದ ಥರ್ಮೋ ಮೀಟರ್ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಮತ್ತೊಂದು ದಾಳಿಯ ಸಂದರ್ಭ 5000 ನಕಲಿ ಸ್ಯಾನಿಟೈಸರ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.