ಬೆಂಗಳೂರು, ಎ.01 (DaijiworldNews/PY) : ತಮ್ಮ ಒಂದು ವರ್ಷದ ವೇತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೊರೊನಾಗೆ ಕೊಡುಗೆಯಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೀಡಿದ್ದಾರೆ.
ಈ ಸಂದರ್ಭ ಸಿಎಂ ಅವರು, ಶಾಸಕರು, ಸಂಸದರು, ಅಧಿಕಾರಿಗಳು ಸಚಿವರ ಹಾಗೂ ಶ್ರೀಮಂತ ನಾಗರಿರು ತಮ್ಮ ಕೈಲಾದಷ್ಟು ಸಹಾಯವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಕಷ್ಟದ ಸಮಯವನ್ನು ನಾವು ಎದುರಿಸುತ್ತಿದ್ದೇವೆ. ನಾವೆಲ್ಲರೂ ಈ ಸಾಂಕ್ರಾಮಿಕ ರೋಗದ ವಿರುದ್ದ ಒಟ್ಟಾಗಿ ಹೋರಾಡಬೇಕಿದೆ. ಪರಿಹಾರ ನಿಧಿಗೆ ನನ್ನ ಇಂದು ವರ್ಷದ ವೇತನವನ್ನು ನೀಡುತ್ತಿದ್ದೇನೆ. ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.