ಕೊಚ್ಚಿನ್, ಎ.01 (DaijiworldNews/PY) : ಕರ್ನಾಟಕದಲ್ಲಿ ಆಸ್ಪತ್ರೆಗಳಲ್ಲಿ ಕಾಸರಗೋಡಿನ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ರೋಗಿಗಳಿಗೆ ಮಾಡಬಹುದಾದ ವ್ಯವಸ್ಥೆಗಳ ವಿಚಾರವಾಗಿ ನ್ಯಾಯಾಲಯಕ್ಕೆ ತಿಳಿಸುವಂತೆ ಕೇರಳ ಹೈಕೋರ್ಟ್ ಮಂಗಳವಾರ ಕೇರಳ ಹಾಗೂ ಕರ್ನಾಟಕ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ನ್ಯಾ.ಎ.ಕೆ.ಜಯಶಂಕರನ್ ನಂಬಿಯಾರ್ ಹಾಗೂ ನ್ಯಾ. ಶಾಜಿ ಪಿ ಕೇರಳ ಹೈಕೋರ್ಟ್ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿದ್ದಾರೆ. ರಾಜ್ಯಗಳು ಕೊರೊನಾ ಸೋಂಕನ್ನುನಿಯಂತ್ರಿಸಲು ತಮ್ಮ ಗಡಿಯನ್ನು ನಿರ್ಬಂಧಿಸಿದೆ. ಹಾಗಾಗಿ ಮಂಗಳೂರು-ಕಾಸರಗೋಡನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಕರ್ನಾಟಕಕ್ಕೆ ಕೇರಳಿಗರಿಗೆ ಚಿಕಿತ್ಸೆಗೆ ಆಗಮಿಸಲು ಆಗುತ್ತಿಲ್ಲ. ಇದನ್ನು ಶೀಘ್ರವೇ ಪರಿಹರಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ವಿಚಾರಣೆ ಸಂದರ್ಭ ಕರ್ನಾಟಕದ ಅಡ್ವೊಕೇಟ್ ಜನರಲ್ ಪಿ.ಕೆ.ನವಡಗಿ ಅವರು ಕೇರಳದ ಬೇಡಿಕೆಯನ್ನು ಪರಿಗಣಿಸಬಹುದು ಎಂದಿದ್ದಾರೆ. ಕಣ್ಣೂರು-ಇರಿಟ್ಟಿ-ಕೊಟ್ಟುಪುಳ-ಮಂಗಳೂರು-ವಿರಾಜಪೇಟೆ ಮಾರ್ಗವನ್ನು ಅಗತ್ಯ ವಸ್ತುಗಳ ಸಾಗಣೆಗೆ ತೆರೆವು ಮಾಡಲು ಸಾಧ್ಯವಿದೆ. ಆದರೆ, ಕೇರಳ ಸರ್ಕಾರವು ಅದಕ್ಕಾಗಿ ಸೂಕ್ತವಾದ ಪತ್ರವನ್ನು ನೀಡಬೇಕು ಎಂದು ಹೇಳಿದ್ದಾರೆ. ಬಳಿಕ ಕರ್ನಾಟಕ ಗೃಹ ಇಲಾಖೆ, ಕೇರಳದ ಹೆಚ್ಚುವರಿ ಅಡ್ವೊಕೇಟ್ ಜನರಲ್ ರಂಜಿತ್ ಥಂಪನ್, ಕರ್ನಾಟಕವು ಅಗತ್ಯ ವಸ್ತುಗಳ ಸಾಗಣೆಗಾಗಿ ಈ ಮಾರ್ಗವನ್ನು ತೆರೆಯುವ ಬಗೆಗೆ ಚಿಂತನೆ ನಡೆಸಬಹುದು ಹೇಳಿದರು.
ನ್ಯಾಯಾಲವು ಇದಾದ ಬಳಿಕ ಕಾರ್ಯದರ್ಶಿ, ಗೃಹ ಇಲಾಖೆ, ಕರ್ನಾಟಕ ಸರ್ಕಾರದೊಡನೆ ಚರ್ಚೆ ನಡೆಸಲು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಕಣ್ಣೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಕರ್ನಾಟಕದ ಅಡ್ವೊಕೇಟ್ ಜನರಲ್, ಕಣ್ಣೂರು-ಇರಿಟ್ಟಿ-ಮನಂತವಾಡಿ-ಸರ್ಗೂರ್-ಬೇಗೂರ್-ನಂಜನಗೂಡು-ಮೈಸೂರು ಮತ್ತು ಕಣ್ಣೂರು-ಸುಲ್ತಾನ್ ಬತೇರಿ -ಗುಂಡ್ಲುಪೇಟೆ -ಮೈಸೂರು ಮಾರ್ಗಗಳನ್ನು ಈಗಾಗಲೇ ಅಗತ್ಯ ವಸ್ತುಗಳ ಸಾಗಣೆಗೆ ತೆರೆಯಲಾಗಿದೆ ಮತ್ತು ಅದನ್ನು ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ. ಕಾಸರಗೋಡು ರೋಗಿಗಳ ಸೇರ್ಪಡೆಗೆ ಜನಸಂದಣಿ ಹೆಚ್ಚಾಗಿದ್ದ ಕಾರಣ ಮಂಗಳೂರು ಆಸ್ಪತ್ರೆಗಳಿಗೆ ಅವಕಾಶ ಕಲ್ಪಿಸಿರಲಿಲ್ಲ. ಅದು ಇಂತಹ ಪರಿಸ್ಥಿತಿಯಲ್ಲಿ ಸಾಧ್ಯವಾಗಿರಲಿಲ್ಲ. ಕೇರಳ ಮತ್ತು ಕರ್ನಾಟಕ ಎರಡೂ ರೋಗಿಗಳ ಸಾಗಣೆಗೆ ಅನುಮತಿ ನೀಡುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಕಾಯ್ದೆಯಡಿ ಹೊರಡಿಸಲಾದ ನಿರ್ದೇಶನಗಳಿಗೆ ಬದ್ಧವಾಗಿವೆ ಎಂದು ಕೇರಳ ಹಾಗೂ ಕರ್ನಾಟಕ ಪ್ರತಿನಿಧಿಗಳು ನ್ಯಾಯಾಲಯಕ್ಕೆ ಹೇಳಿದ್ದಾರೆ. ನಿವಾಸದ ಅವಶ್ಯಕತೆಯು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲು ಮಾನದಂಡವಾಗಿರಬಾರದು ಎಂದು ಕೇರಳ ವಾದಿಸಿದೆ. ಮಂಗಳೂರಿಗೆ ತಲಪ್ಪಾಡಿಯಿಂದ ಕೇವಲ 15 ಕಿಮೀ ದೂರವಿದೆ ಎಂದು ಕೇರಳ ಸರ್ಕಾರದ ಪರವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.