ನವದೆಹಲಿ,ಏ 01 (Daijiworld News/MSP): ದೇಶಾದ್ಯಂತ ಲಾಕ್ ಡೌನ್ ಇರುವ ಮದ್ಯೆಯೇ ಸಬ್ಸಿಡಿ ರಹಿತ ಅಡುಗೆ ಅನಿಲದ ಪ್ರತಿ ಸಿಲಿಂಡರ್ ದರವನ್ನುಇಳಿಕೆಯಾಗಿದೆ. ಇದರಿಂದಾಗಿ ಅಡುಗೆ ಅನಿಲದ ದರವು ಎರಡನೇ ತಿಂಗಳಲ್ಲಿ ಸತತ ಎರಡನೇ ಬಾರಿಗೆ ಇಳಿಕೆ ಮಾಡಿದಂತಾಗಿದೆ.
ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಪ್ರತಿ ಸಿಲಿಂಡರ್ ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ಗೆ 65 ರೂಪಾಯಿ ಕಡಿತಗೊಳಿಸಲಾಗಿದೆ. ಕೆಲವು ವಾರಗಳಿಂದ ಕಚ್ಚಾ ತೈಲ ದರ ಇಳಿಕೆಯಾಗಿರುವ ಪರಿಣಾಮ ಈ ಬೆಳವಣಿಗೆ ಕಾಣುತ್ತಿದ್ದೇವೆ.
ಈ ನಡುವೆ ಏ.1 ರಂದು ಭಾರತೀಯ ತೈಲ ಕಾರ್ಪೊರೇಷನ್ ಮಹತ್ವದ ಘೋಷಣೆ ಮಾಡಿದ್ದು, ಸಿಲಿಂಡರ್ ಪೂರೈಕೆದಾರರು ಒಂದು ವೇಳೆ ಕೊರೊನಾಗೆ ಬಲಿಯಾದರೆ ಮೃತರ ಕುಟುಂಬದವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದೆ.
ಪ್ರಮುಖ ಸಿಲಿಂಡರ್ ಪೂರೈಕೆದಾರರಿಗೆ ಕೊರೊನಾ ಸೋಂಕಿನ ಅಪಾಯ ಹೆಚ್ಚಿದೆ. ಒಂದು ವೇಳೆ ಪೂರೈಕೆದಾರಿಗೆ ಪ್ರಾಣಾಪಾಯ ಸಂಭವಿಸಿದರೆ, ಅವರ ಕುಟುಂಬ ಸದಸ್ಯರಿಗೆ ಅಥವಾ ಪತ್ನಿಗೆ 5 ಲಕ್ಷ ರೂಪಾಯಿ ನೀಡಲಾಗುವುದು ಎಂದು ಎಲ್ ಪಿಜಿಯ ಪೂರೈಕೆ ಮತ್ತು ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಮಾಥುರ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.