ಚೆನ್ನೈ, ಏ 01 (DaijiworldNews/SM): ದೇಶವನ್ನೇ ಕೊರೊನಾ ಮಹಾಮಾರಿ ತತ್ತರಿಸುವಂತೆ ಮಾಡಿದೆ. ಈ ನಡುವೆ ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ 110 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ನಿರಂತರ ಏರಿಕೆಗೊಂಡು 234ಕ್ಕೆ ತಲುಪಿದೆ.
ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ತಮಿಳುನಾಡಿನಿಂದ ಸುಮಾರು 1500 ಮಂದಿ ಭಾಗವಹಿಸಿದ್ದರು. ಆದರೆ, ತಮಿಳುನಾಡು ಸರಕಾರ ಈ ಎಲ್ಲರನ್ನು ಗುರುತಿಸಿ ಇನ್ನಷ್ಟೇ ಪರೀಕ್ಷೆಗೆ ಒಳಪಡಿಸಬೇಕಾಗಿದೆ.