ಮುಂಬೈ, ಎ.03 (Daijiworld News/MB) : ಧಾರಾವಿಯ 35 ವಯಸ್ಸಿನ ವೈದ್ಯರಿಗೂ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದ್ದು, ಅವರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ.
ಹಾಗೆಯೇ ಈ ವೈದ್ಯರನ್ನು ಸಂಪರ್ಕಿಸಿರುವ ಎಲ್ಲರನ್ನು ಪತ್ತೆ ಹಚ್ಚಿ ಪ್ರತ್ಯೇಕವಾಗಿಡುವ ಕಾರ್ಯ ಆರಂಭ ಮಾಡಲಾಗಿದ್ದು ವೈದ್ಯರ ಕುಟುಂಬವನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಇಂದು ಕುಟುಂಬದವರ ಸೋಂಕಿನ ಪರೀಕ್ಷೆ ನಡೆಸಲಿದ್ದು ವೈದ್ಯರ ಕುಟುಂಬ ನೆಲೆಸಿದ್ದ ಕಟ್ಟಡಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಇಂದು ಬೀಗ ಮುದ್ರೆ ಹಾಕಿದ್ದಾರೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.
ಧಾರಾವಿಯು ಏಶ್ಯಾದ ಅತ್ಯಂತ ದೊಡ್ಡ ಕೊಳಗೇರಿ ಪ್ರದೇಶವಾಗಿದ್ದು ಮೂರು ದಿನಗಳಲ್ಲಿ ಮೂರನೇ ಬಾರಿ ಕೊರೊನಾ ಸಂಬಂಧಿಸಿದ ಪ್ರಕರಣದ ದಾಖಲಾಗಿದೆ.
ಗುರುವಾರ 52 ವಯಸ್ಸಿನ ಪೌರ ಕಾರ್ಮಿಕನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಬುಧವಾರ 52 ವರ್ಷದ ವ್ಯಕ್ತಿ ಸೋಂಕಿನಿಂದಾಗಿ ಮೃತಪಟ್ಟಿದ್ದರು.