ನವದೆಹಲಿ, ಎ.04 (Daijiworld News/MB) : ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿ ಪ್ರಧಾನಿ ಮೋದಿ ಆದೇಶಿಸಿದ್ದು ವ್ಯವಹಾರ, ವಿಮಾನ, ರೈಲು, ಬಸ್ ಸೇರಿದಂತೆ ಎಲ್ಲಾ ರೀತಿಯ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇದರಿಂದಾಗಿ ಪ್ರತಿದಿನ ಭಾರತಕ್ಕೆ 35 ಸಾವಿರ ಕೋಟಿ ನಷ್ಟವಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಆ್ಯಕ್ಯೂಟ್ ರೇಟಿಂಗ್ ಅಂಡ್ ರಿಸರ್ಚ್ ಲಿಮಿಟೆಡ್ 21 ದಿನಗಳ ಕಾಲದ ಲಾಕ್ಡೌನ್ನಿಂದಾಗಿ ದೇಶದ ಆರ್ಥಿಕತೆಗೆ ಸುಮಾರು 98 ಬಿಲಿಯನ್ ಅಮೆರಿಕನ್ (ಅಂದಾಜು 7.35ಲಕ್ಷ ಕೋಟಿ) ಡಾಲರ್ ನಷ್ಟು ನಷ್ಟವಾಗಲಿದೆ ಎಂದು ತಿಳಿಸಿದೆ.
21 ದಿನಗಳ ಲಾಕ್ಡೌನ್ ಏಪ್ರಿಲ್ 14ರಂದು ಕೊನೆಗೊಳ್ಳಲಿದೆ. ಆದರೆ ಆ ಬಳಿಕವೂ ಮುಂದುವರೆಯಲಿದೆಯೇ ಎಂಬುದು ಇನ್ನಷ್ಟೆ ತಿಳಿದು ಬರಬೇಕಾಗಿದೆ. ಆದರೆ ದೇಶಕ್ಕೆ ಆಗಿರುವ ಆರ್ಥಿಕ ಹೊಡೆತದಿಮದಾಗಿ ಚೇತರಿಸಿಕೊಳ್ಳಲು ಕೆಲವು ಸಮಯ ಬೇಕಿದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ತಿಳಿಸಿದೆ.